HomeKarnatakaBIG NEWS: ಶಾಸಕರನ್ನು ಖರೀದಿ ಮಾಡೋಕೆ ಅವರೇನು ಕತ್ತೇನಾ? ಕುದುರೆನಾ? ಸಿ.ಟಿ. ರವಿ ವಾಗ್ದಾಳಿ

BIG NEWS: ಶಾಸಕರನ್ನು ಖರೀದಿ ಮಾಡೋಕೆ ಅವರೇನು ಕತ್ತೇನಾ? ಕುದುರೆನಾ? ಸಿ.ಟಿ. ರವಿ ವಾಗ್ದಾಳಿ

ಬೆಂಗಳೂರು: ಬಿಜೆಪಿಯಿಂದ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಯತ್ನ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಕಿಡಿಕಾರಿರುವ ಎಂಎಲ್ ಸಿ ಸಿ.ಟಿ.ರವಿ, ನಿಮ್ಮ ಶಾಸಕರನ್ನು ಖರಿದೀಸಲು ಅವರೇನು ಕತ್ತೇನಾ? ಕುದುರೇನಾ? ದನಗಳಾ? ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಮ್ಮ ಪಕ್ಷದ ಶಾಸಕರು ಅಷ್ಟು ದುರ್ಬಲರಾ? ಬದ್ಧತೆ ಇರುವ ಯಾವುದೇ ಶಾಸಕರನ್ನು ಖರೀದಿ ಮಡಲು ಸಾಧ್ಯವಿಲ್ಲ ಎಂದು ಗುಡುಗಿದರು.

ಸಿದ್ದರಾಮಯ್ಯ ಆರೋಪ ಆಧಾರ ರಹಿತವಾಗಿದೆ. ಯಾರು, ಯಾವಾಗ, ಯಾರನ್ನು ಖರೀದಿ ಮಾಡಲು ಪ್ರಯತ್ನ ಮಾಡಿದರು? ಆಧಾರ ಇದ್ದರೆ ದೂರು ನೀಡಿ. ಸಾಕ್ಷಿ ಇದ್ದರೆ ನ್ಯಾಯಾಲಯದಲ್ಲಿ ನಿರೂಪಿಸಿ. ಸಿಎಂ ಸ್ಥಾನದಲ್ಲಿದ್ದುಕೊಂಡು ಆ ಸ್ಥಾನದ ಜವಾಬ್ದಾರಿ ಮರೆತು ಕೇವಲ ಆರೋಪ ಮಡೋದು ರಾಜಕೀಯ ಪ್ರೇರಿತ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular