HomeKarnatakaBIG NEWS: ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸುವ ಮೊದಲ ಹೆಜ್ಜೆ ಇದು: ಶಕ್ತಿ ಯೋಜನೆ ಸ್ಥಗಿತ ಸುಳಿವಿಗೆ...

BIG NEWS: ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸುವ ಮೊದಲ ಹೆಜ್ಜೆ ಇದು: ಶಕ್ತಿ ಯೋಜನೆ ಸ್ಥಗಿತ ಸುಳಿವಿಗೆ HDK ವಾಗ್ದಾಳಿ

ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುತ್ತಿದ್ದ ಶಕ್ತಿ ಯೋಜನೆ ಸ್ಥಗಿತ ಸುಳಿವು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿಡ ಹೆಚ್.ಡಿ.ಕುಮಾರಸ್ವಾಮಿ, ಇದು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವ ಮೊದಲ ಹೆಜ್ಜೆ ಎಂದು ಕಿಡಿಕಾರಿದ್ದಾರೆ.

ಒಂದೊಂದೇ ಗ್ಯಾರಂಟಿ ಯೋಜನೆಗಳನ್ನು ಮರೆಯಾಗಿಸಲು ಇದೊಂದು ಕಾರಣ ಅಷ್ಟೇ. ಕನಸಿನಲ್ಲಿ ಮಹಿಳೆಯರು ಬಂದು ಹೇಳಿದ್ದಾರೋ? ಅಥವಾ ದೇವರು ಬಂದು ಜ್ಞಾನೋದಯ ಮಾಡಿದ್ದಾರೋ? ಹಣ ಕೊಟ್ಟು ಪ್ರಯಾಣಿಸುತ್ತೇವೆ ಎಂದು? ಟ್ವೀಟ್ ಮೂಲಕ ಮಹಿಳೆಯರು ಹೇಳಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಕ್ಕೆ ಈ ಯೋಜನೆಗಳನ್ನು ದೀರ್ಘಾವದಿವರೆಗೆ ಮಾಡಲು ಆಗುತ್ತಿಲ್ಲ. ಹಾಗಾಗಿ ಒಂದೊಂದಾಗಿ ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸಲು ಮೊದಲ ಹಂತದ ಪ್ರಕ್ರಿಯೆ ಇದು. ಗ್ಯಾರಂಟಿ ನಿಲ್ಲಿಸಲು ಇದೊಂದು ಪೀಠಿಕೆ ಹಾಕಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸದೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದದರೆ.

For Latest News Updates, Join Our Whatsapp Community🚩
RELATED ARTICLES

Most Popular