HomeIndiaಶಬರಿಮಲೆ ಪಾದಯಾತ್ರೆ ವೇಳೆ ದುರಂತ; ಬೆಟ್ಟ ಹತ್ತುವಾಗ ಕುಸಿದುಬಿದ್ದು ಬಾಲಕಿ ದುರ್ಮರಣ

ಶಬರಿಮಲೆ ಪಾದಯಾತ್ರೆ ವೇಳೆ ದುರಂತ; ಬೆಟ್ಟ ಹತ್ತುವಾಗ ಕುಸಿದುಬಿದ್ದು ಬಾಲಕಿ ದುರ್ಮರಣ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ತಮಿಳುನಾಡು ಮೂಲದ 12 ವರ್ಷದ ಪದ್ಮಶ್ರೀ ಮೃತ ಬಾಲಕಿ. ಪಾದಯಾತ್ರೆ ಮೂಲಕ ದೇಗುಲಕ್ಕೆ ಹೋಗುತ್ತಿದ್ದಾಗ ಅಪ್ಪಾಚಿಮೇಡು ಎಂಬಲ್ಲಿ ಬಾಲಕಿ ಕುಸಿದು ಬಿದ್ದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಆಕೆಯನ್ನು ಸ್ಥಳೀಯ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಬಾಲಕಿಗೆ ಮೊದಲೇ ಹೃದ್ರೋಗ ಸಮಸ್ಯೆ ಇತ್ತು. ಚಿಕಿತ್ಸೆ ಪಡೆಯುತ್ತಲೇ ಶಬರಿಮಲೆ ಬೆಟ್ಟ ಏರಲು ಮುಂದಾಗಿದ್ದಳು ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular