HomeLive Newsಸೆಕ್ಸ್ ಸಿಡಿ ಕೇಸ್: ಮಾಜಿ ಸಿಎಂ ಭೂಪೇಶ್ ಬಘೇಲ್ ಖುಲಾಸೆ ಆದೇಶ ರದ್ದುಗೊಳಿಸಿದ ಸಿಬಿಐ ಕೋರ್ಟ್

ಸೆಕ್ಸ್ ಸಿಡಿ ಕೇಸ್: ಮಾಜಿ ಸಿಎಂ ಭೂಪೇಶ್ ಬಘೇಲ್ ಖುಲಾಸೆ ಆದೇಶ ರದ್ದುಗೊಳಿಸಿದ ಸಿಬಿಐ ಕೋರ್ಟ್

ರಾಯ್ಪುರ: ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತಿಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ರಾಯ್ಪುರ ಸಿಬಿಐ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಭೂಫೇಶ್ ಭಗೇಲ್ ಗೆ ಮತ್ತೆ ಸಂಕಷ್ಟ ಎದುರಾಗಿದೆ.

2017ರ ಸೆಕ್ಸ್ ಸಿಡಿ ಪ್ರಕರಣದಲ್ಲಿ ಭೂಪೇಶ್ ಬಘೇಲ್ ಅವರನ್ನು ಖುಲಾಸೆಗೊಳಿಸಿ 2024ರಲ್ಲಿ ಮ್ಯಾಜಿಸ್ಟ್ರ‍ೇಟ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಇದೀಗ ಸಿಬಿಐ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ರಾಜೇಶ್ ಮುನಾತ್ ಅಂದು ಛತ್ತೀಸ್ ಗಢ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ರಾಜೇಶ್ ಮುನಾತ್ ಅವರ ಮಾನನಷ್ಟಕ್ಕೆ ಸಂಬಂಧಿಸಿದ ಕೇಸ್ ಇದಾಗಿದೆ.

ಈ ಪ್ರಕರಣದ ಇತರ ಆರೋಪಿಗಳಾದ ಕೈಲಾಶ್ ಮುರಾರ್ಕ, ವಿನೋದ್ ವರ್ಮಾ ಮತ್ತು ವಿಜಯ್ ಭಾಟಿಯಾ ಅವರು ತಮ್ಮ ವಿರುದ್ಧ ಆರೋಪಗಳನ್ನು ರೂಪಿಸುವ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಕೋರ್ಟ್ ತಿರಸ್ಕರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದಿನ ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ರಾಜೇಶ್ ಮುನಾತ್ ಹೆಸರಿಗೆ ಕಳಮ್ಕ ತರಲು ನಕಲಿ ಸೆಕ್ಸ್ ಸಿಡಿ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪವನ್ನು ಮಾಜಿ ಸಿಎಂ ಭೂಪೇಶ್ ಭಗೇಲ್ ಎದುರಿಸುತ್ತಿದ್ದಾರೆ. ಅಂದು ವೈರಲ್ ಆಗಿದ್ದ ವಿಡಿಯೋದಲ್ಲಿ ರಾಜೇಶ್ ಮುನಾತ್ ಅವರ ಆಕ್ಷೇಪಾರ್ಹ ವಿಡಿಯೋಗಳಿದ್ದವು. ಈ ಪ್ರಕರಣ ಸಂಬಂಧ 2016ರ ಅಕ್ಟೋಬರ್ ನಲ್ಲಿ ಪತ್ರಕರ್ತ ಹಾಗೂ ಭೂಪೇಶ್ ಭಗೇಲ್ ಅವರ ಸಲಹೇಗಾರ ವಿನೋದ್ ಶರ್ಮಾನನ್ನು 500 ಸಿಡಿಗಳ ಸಮೇತ ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿತ್ತು. ವಿಡಿಯೋವನ್ನು ಹರಿಬಿಟ್ಟು ಮುನಾತ್ ಅವರಿಗೆ ಕಳಂಕ ತರಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮುನಾತ್ ದೂರಿನ ಮೇರೆಗೆ ಭೂಪೇಶ್ ಬಘೇಲ್ ಅವರನ್ನು ಬಂಧಿಸಲಾಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular