HomeIndiaರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ: ಯತ್ನಾಳ್ ಹೇಳಿಕೆಗೆ ಸಚಿನ್ ಪೈಲಟ್ ಖಂಡನೆ

ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ: ಯತ್ನಾಳ್ ಹೇಳಿಕೆಗೆ ಸಚಿನ್ ಪೈಲಟ್ ಖಂಡನೆ

ಜೈಪುರ(ರಾಜಸ್ಥಾನ): ರಾಜಕೀಯ ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರ ಎಂದು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹೇಳಿದ್ದಾರೆ. ಯತ್ನಾಳ್ ಅವರ ಹೇಳಿಕೆ ರಾಜಕೀಯದಲ್ಲಿ ನಕಾರಾತ್ಮಕ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ `ವಿಷಕನ್ಯೆ’ ಪದ ಬಳಸಿರುವುದನ್ನು ಪೈಲಟ್ ಖಂಡಿಸಿದ್ದಾರೆ. ನಾಯಕರ ವಿರುದ್ಧ ಬಳಸುತ್ತಿರುವ ಭಾಷೆ ದುರದೃಷ್ಟಕರವಾಗಿದೆ. ಇದು ರಾಜಕೀಯದಲ್ಲಿ ನಕಾರಾತ್ಮಕ ಉದಾಹರಣೆಯಾಗಿದೆ. ಸೋನಿಯಾ ಗಾಂಧಿ ಅವರು ಅತ್ಯಂತ ಹಿರಿಯ ನಾಯಕಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು, ಅವರಿಗೆ ಇಂತಹ ಭಾಷೆ ಬಳಸಿರುವುದು ಅತ್ಯಂತ ಖಂಡನೀಯ ಎಂದು ಪೈಲಟ್ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular