HomeKarnatakaಭೀಕರ ಸರಣಿ ಅಪಘಾತ; ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಹರಿದ ಕ್ಯಾಂಟರ್; ಸ್ಥಳದಲ್ಲೇ ದುರ್ಮರಣ

ಭೀಕರ ಸರಣಿ ಅಪಘಾತ; ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಹರಿದ ಕ್ಯಾಂಟರ್; ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಕ್ಯಾಂಟರ್, ಕೆ.ಎಸ್.ಆರ್.ಟಿ.ಸಿ ಬಸ್, ಬೈಕ್ ಸರಣಿ ಅಪಘಾತದಲ್ಲಿ ರಸ್ತೆ ದಾಟುತ್ತಿದ್ದ ಯುವತಿ ಬಲಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಕೋರ್ಟ್ ಸರ್ಕಲ್ ಬಳಿ ನಡೆದಿದೆ.

ಬೆಂಗಳೂರಿನಿಂದ ಕೋಲಾರದ ಕಡೆಗೆ ಕ್ಯಾಂಟರ್ ವಾಹನ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ತಾಯಿ ಜೊತೆ ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಕ್ಯಾಂಟರ್ ಹರಿದಿದೆ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬನ್ನೇರುಘಟ್ಟ ನಿವಾಸಿ ಸುಧಾ (20) ಮೃತ ಯುವತಿ. ಅಪಘಾತದಲ್ಲಿ ಯುವತಿಯ ತಾಯಿ ಹಾಗೂ ಬೈಕ್ ಸವಾರ, ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ಆಸ್ಪತೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular