HomeBusinessಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ: ಯಾವ ದಿನ ಸೇವೆ ಬಂದ್? ಇಲ್ಲಿದೆ ಸಂಪೂರ್ಣ ಪಟ್ಟಿ

ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ: ಯಾವ ದಿನ ಸೇವೆ ಬಂದ್? ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು: ಇನ್ನೇನು ಆಗಸ್ಟ್ ಮುಗಿದು ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತಿದೆ. ಹೊಸ ತಿಂಗಳು ಶುರುವಾಗುತ್ತಿದ್ದಂತೆ ಪ್ರತಿಯೊಬ್ಬರೂ ಗಮನಿಸುವುದು ರಜಾದಿನಗಳ ಪಟ್ಟಿಯನ್ನು. ವಿಶೇಷವಾಗಿ ಬ್ಯಾಂಕ್ ವ್ಯವಹಾರ ಅಥವಾ ಹಣಕಾಸಿನ ಕೆಲಸಗಳಿದ್ದವರು ರಜಾದಿನಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಸೂಕ್ತ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ರಜಾ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ಪ್ರಾದೇಶಿಕ ಹಬ್ಬಗಳು, ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳು ಸೇರಿ ದೇಶಾದ್ಯಂತ ಹಲವು ದಿನ ಬ್ಯಾಂಕ್ ಶಾಖೆಗಳು ಮುಚ್ಚಲಿವೆ.ಎಸ್‍ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ ಸೇರಿದಂತೆ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕ್‌ಗಳಿಗೆ ಈ ರಜೆಗಳು ಅನ್ವಯವಾಗಲಿವೆ.

ಸೆಪ್ಟೆಂಬರ್‌ನಲ್ಲಿ ಪ್ರಮುಖ ಬ್ಯಾಂಕ್ ರಜೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೆಪ್ಟೆಂಬರ್ 4, ಶುಕ್ರವಾರ: ಜನ್ಮಾಷ್ಟಮಿ (ವೈಷ್ಣವ) / ಕೃಷ್ಣ ಜಯಂತಿ ಹಲವು ನಗರಗಳಲ್ಲಿ ಬ್ಯಾಂಕ್‌ ರಜೆ.

ಸೆಪ್ಟೆಂಬರ್ 12, ಶನಿವಾರ: ಎರಡನೇ ಶನಿವಾರ ದೇಶಾದ್ಯಂತ ಬ್ಯಾಂಕ್‌ ಶಾಖೆಗಳು ಬಂದ್.

ಸೆಪ್ಟೆಂಬರ್ 14, ಸೋಮವಾರ: ಗಣೇಶ ಚತುರ್ಥಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬ್ಯಾಂಕ್‌ ರಜೆ.

ಸೆಪ್ಟೆಂಬರ್ 15, ಮಂಗಳವಾರ: ಸಂವತ್ಸರಿ, ನುಖೈ ಹಾಗೂ ಗಣೇಶ ಚತುರ್ಥಿಯ ಎರಡನೇ ದಿನ ಅಹಮದಾಬಾದ್‌, ಭುವನೇಶ್ವರ ಮತ್ತು ಪಣಜಿಯಲ್ಲಿ ರಜೆ.

ಸೆಪ್ಟೆಂಬರ್ 21, ಸೋಮವಾರ: ಶ್ರೀಮಂತ ಶಂಕರದೇವ / ಶ್ರೀ ನಾರಾಯಣ ಗುರು ಸಮಾಧಿ ಜನ್ಮೋತ್ಸವ ಗುವಾಹಟಿ, ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ರಜೆ.

ಸೆಪ್ಟೆಂಬರ್ 22, ಮಂಗಳವಾರ: ಕರ್ಮ ಪೂಜೆ ರಾಂಚಿಯಲ್ಲಿ ಬ್ಯಾಂಕ್‌ ರಜೆ.

ಸೆಪ್ಟೆಂಬರ್ 23, ಬುಧವಾರ: ಮಹಾರಾಜ ಹರಿ ಸಿಂಗ್‌ ಜಿ ಅವರ ಜನ್ಮದಿನ ಜಮ್ಮು ಮತ್ತು ಶ್ರೀನಗರದಲ್ಲಿ ರಜೆ.

ಸೆಪ್ಟೆಂಬರ್ 25, ಶುಕ್ರವಾರ: ಇಂದ್ರ ಜಾತ್ರಾ ಗ್ಯಾಂಗ್ಟಾಕ್‌ನಲ್ಲಿ ರಜೆ

ಸೆಪ್ಟೆಂಬರ್ 26, ಶನಿವಾರ: ನಾಲ್ಕನೇ ಶನಿವಾರ ದೇಶಾದ್ಯಂತ ಬ್ಯಾಂಕ್‌ ಶಾಖೆಗಳು ಬಂದ್.

ಸೆಪ್ಟೆಂಬರ್ 6, 13, 20 ಮತ್ತು 27: ಭಾನುವಾರ ದೇಶಾದ್ಯಂತ ಬ್ಯಾಂಕ್‌ ರಜೆ.

ಕರ್ನಾಟಕದಲ್ಲಿ ಸೆಪ್ಟೆಂಬರ್ 2026ರ ಬ್ಯಾಂಕ್ ರಜೆ

ಕರ್ನಾಟಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಮುಖವಾಗಿ 3 ದಿನ ಬ್ಯಾಂಕ್‌ ರಜೆ ಇರಲಿದೆ:

ಸೆಪ್ಟೆಂಬರ್ 12: ಎರಡನೇ ಶನಿವಾರ

ಸೆಪ್ಟೆಂಬರ್ 14: ಗಣೇಶ ಚತುರ್ಥಿ

ಸೆಪ್ಟೆಂಬರ್ 26: ನಾಲ್ಕನೇ ಶನಿವಾರ

ಇದರ ಜೊತೆಗೆ ಸೆಪ್ಟೆಂಬರ್ 6, 13, 20 ಮತ್ತು 27ರಂದು ಭಾನುವಾರ ಇರುವುದರಿಂದ ಬ್ಯಾಂಕ್‌ ಶಾಖೆಗಳು ಮುಚ್ಚಿರುತ್ತವೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular