HomeKarnatakaರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು: ಎಂ.ಬಿ. ಪಾಟೀಲ್

ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಬಂಡವಾಳ ಹರಿವು: ಎಂ.ಬಿ. ಪಾಟೀಲ್

ಬೆಂಗಳೂರು: ನವದೆಹಲಿಯಲ್ಲಿ ಏರ್ಪಡಿಸಿದ್ದ ಸೆಮಿಕಾನ್ ಇಂಡಿಯಾ 2026 ಸಮಾವೇಶದಲ್ಲಿ 20ಕ್ಕೂ ಅಧಿಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯಕ್ಕೆ 15 ಸಾವಿರ ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹರಿದು ಬರಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಎರಡು ದಿನಗಳ ಸೆಮಿಕಾನ್ ಇಂಡಿಯಾ ಸಮಾವೇಶಕ್ಕೆ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿದ್ದ ಸಚಿವ ಎಂ.ಬಿ. ಪಾಟೀಲ್ ದೆಹಲಿಯಿಂದ ವಾಪಾಸ್ ಆದ ಬಳಿಕ ಮಾಹಿತಿ ಹಂಚಿಕೊಂಡಿದ್ದಾರೆ.

ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಲ್ಯಾಮ್ ರಿಸರ್ಚ್ ಕಂಪನಿ ರಾಜ್ಯದಲ್ಲಿ 9298 ಕೋಟಿ ರೂ., ಅಪ್ಲೈಡ್ ಮೆಟೀರಿಯಲ್ಸ್ ಮುಂದಿನ 10 ವರ್ಷದಲ್ಲಿ ಮೊದಲ ಹಂತದಲ್ಲಿ 3600 ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿವೆ. ಈ ಎರಡು ಯೋಜನೆಗಳಿಂದ ರಾಜ್ಯದ ಸೆಮಿಕಂಡಕ್ಟರ್ ಸರಪಳಿ, ಚಿಪ್ ವಿನ್ಯಾಸ ಮತ್ತು ಈ ಕ್ಷೇತ್ರದ ಸಾಧನಗಳ ತಯಾರಿಕೆ, ಸಂಶೋಧನೆ ಅಭಿವೃದ್ಧಿ ಚಿತ್ರಣ ಬದಲಾಗಲಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾಗತಿಕ ಸೆಮಿಕಂಡಕ್ಟರ್ ದಿಗ್ಗಜರ ಆಯ್ಕೆ – ಕರ್ನಾಟಕ.  ₹15,000+ ಕೋಟಿಗೂ ಬಂಡವಾಳ ಹರಿದು ಬರಲಿದೆ. ‘EMICON India 2026’ ಕರ್ನಾಟಕದ ಸೆಮಿಕಂಡಕ್ಟರ್ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಜಾಗತಿಕ ದಿಗ್ಗಜರಾದ Lam Research ಮತ್ತು Applied Materials ಕರ್ನಾಟಕದಲ್ಲಿ ಮಹತ್ವದ ಹೂಡಿಕೆಗಳನ್ನು ಘೋಷಿಸಿದ್ದು, ಅತ್ಯಾಧುನಿಕ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಸೆಮಿಕಂಡಕ್ಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

Lam Research : ₹9,298 ಕೋಟಿ ಭಾರತದಲ್ಲೇ ತನ್ನ ಮೊದಲ ಸಿಲಿಕಾನ್ ಘಟಕಗಳ ಅತ್ಯಾಧುನಿಕ ತಯಾರಿಕಾ ಘಟಕ ಸ್ಥಾಪಿಸಲಿದೆ. Applied Materials : ₹3,600 ಕೋಟಿ (ಮೊದಲ ಹಂತ) ಕಂಪನಿಯ US$5 Billion India Vision 2035 ಯೋಜನೆಯಡಿ ಬೆಂಗಳೂರಿನ Signature Business Park ನಲ್ಲಿ ತನ್ನ ವಿಸ್ತರಣೆಗೆ ಮತ್ತಷ್ಟು ವೇಗ ನೀಡಲಿದೆ.

ಈ ಎರಡೂ ಯೋಜನೆಗಳು ಸೆಮಿಕಂಡಕ್ಟರ್ ಉತ್ಪಾದನೆ, ಮೆಟೀರಿಯಲ್ಸ್, ಉಪಕರಣಗಳು, R&D ಹಾಗೂ Precision Engineering ಕ್ಷೇತ್ರಗಳಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಇನ್ನಷ್ಟು ಆಳಗೊಳಿಸಲಿದ್ದು, 2,000ಕ್ಕೂ ಹೆಚ್ಚು ಹೈಟೆಕ್ ಉದ್ಯೋಗಗಳಿಗೆ ಅವಕಾಶ ಸೃಷ್ಟಿಸಲಿವೆ ಎಂದು ಮಾಹಿತಿ ನೀಡಿದ್ದಾರೆ.

ಇದು ಕರ್ನಾಟಕದ ಕೈಗಾರಿಕಾ ಪರಿಸರ ವ್ಯವಸ್ಥೆ, ಪ್ರತಿಭಾವಂತ ಮಾನವ ಸಂಪನ್ಮೂಲ ಹಾಗೂ ಹೂಡಿಕೆದಾರ ಸ್ನೇಹಿ ಸರ್ಕಾರದ ನೀತಿಗಳ ಮೇಲಿನ ಜಾಗತಿಕ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ Nexperia, ASML, Samsung, Tokyo Electron, Fujifilm, Syrma SGS, AT&S, CG Semi, Ericsson ಸೇರಿದಂತೆ 20ಕ್ಕೂ ಹೆಚ್ಚು ಜಾಗತಿಕ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ಕರ್ನಾಟಕಕ್ಕೆ ಮತ್ತಷ್ಟು ಹೂಡಿಕೆ ಮತ್ತು ಅತ್ಯಾಧುನಿಕ ಉತ್ಪಾದನಾ ಅವಕಾಶಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದೇವೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ನಮ್ಮ ಪಯಣ ಮುಂದುವರಿಯಲಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular