HomeEntertainmentಸೆಹ್ವಾಗ್ ಪ್ರಶಂಸೆಗೆ 'ಹನುಮಾನ್ ಅಂಶ್ ' ನಿರ್ದೇಶಕ ಭಾವುಕ: ವಿರಾಟ್-ಅನುಷ್ಕಾ ಸಿನಿಮಾ ನೋಡಲಿ ಎಂದ ವಿಶಾಲ್!

ಸೆಹ್ವಾಗ್ ಪ್ರಶಂಸೆಗೆ ‘ಹನುಮಾನ್ ಅಂಶ್ ‘ ನಿರ್ದೇಶಕ ಭಾವುಕ: ವಿರಾಟ್-ಅನುಷ್ಕಾ ಸಿನಿಮಾ ನೋಡಲಿ ಎಂದ ವಿಶಾಲ್!

ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ‘ಹನುಮಾನ್ ಅಂಶ್’ ಸಿನಿಮಾದ ಯಶಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಮಗನೊಂದಿಗೆ ಈ ಚಿತ್ರವನ್ನು ವೀಕ್ಷಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಸೆಹ್ವಾಗ್ ಅವರ ಈ ಸ್ವಯಂಪ್ರೇರಿತ ಪ್ರಶಂಸೆಯು ಚಿತ್ರದ ನಿರ್ದೇಶಕ ಮತ್ತು ಬರಹಗಾರ ಡಾ. ವಿಶಾಲ್ ಚತುರ್ವೇದಿ ಅವರ ಮನಸ್ಸನ್ನು ತಟ್ಟಿದೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಾ. ವಿಶಾಲ್ ಚತುರ್ವೇದಿ, “ನಾನು ಕ್ರಿಕೆಟ್‌ನ ತೀವ್ರ ಅಭಿಮಾನಿಯಾಗಿದ್ದೆ, ವೀರೇಂದ್ರ ಸೆಹ್ವಾಗ್ ನಿವೃತ್ತರಾದ ದಿನವೇ ನಾನು ಕ್ರಿಕೆಟ್ ನೋಡುವುದನ್ನು ನಿಲ್ಲಿಸಿದ್ದೆ. ನಾವು ಯಾವುದೇ ವಿನಂತಿ ಮಾಡದಿದ್ದರೂ, ಅವರು ಸ್ವತಃ ಮಗನೊಂದಿಗೆ ಸಿನಿಮಾ ನೋಡಿ ಶ್ಲಾಘಿಸಿರುವುದು ನನ್ನ ಜೀವನದ ವರ್ತುಲ ಪೂರ್ಣಗೊಂಡಂತೆ ಭಾಸವಾಗುತ್ತಿದೆ” ಎಂದು ಭಾವುಕರಾಗಿ ಹೇಳಿದ್ದಾರೆ. ಸೆಹ್ವಾಗ್ ಅವರ ಮಾತುಗಳು ಬಾಕ್ಸ್ ಆಫೀಸ್ ಗಳಿಕೆಗಿಂತಲೂ ತಮಗೆ ಹೆಚ್ಚು ವಿಶೇಷವಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೆಹ್ವಾಗ್ ಅವರ ಬೆಂಬಲದ ಬೆನ್ನಲ್ಲೇ ನಿರ್ದೇಶಕ ವಿಶಾಲ್ ಚತುರ್ವೇದಿ ತಮ್ಮ ಮುಂದಿನ ಆಸೆಯನ್ನು ಹೊರಹಾಕಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರು ‘ಹನುಮಾನ್ ಅಂಶ’ ಚಿತ್ರವನ್ನು ವೀಕ್ಷಿಸಬೇಕು ಎಂಬುದು ತಮ್ಮ ಹೆಬ್ಬಯಕೆಯಾಗಿದೆ ಎಂದು ಅವರು ಹೇಳಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಜೋಡಿ ಈ ಸಿನಿಮಾ ನೋಡಿದರೆ ಚಿತ್ರತಂಡಕ್ಕೆ ಅತ್ಯಂತ ಸಂತಸದ ವಿಷಯವಾಗಲಿದೆ ಎಂದು ನಿರ್ದೇಶಕರು ಆಶಯ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular