HomeAstroಕನಸಿನಲ್ಲಿ ಈ ಹೂವು ಕಂಡರೆ ದೊರೆಯುತ್ತೆ ಶೀಘ್ರ ಫಲ

ಕನಸಿನಲ್ಲಿ ಈ ಹೂವು ಕಂಡರೆ ದೊರೆಯುತ್ತೆ ಶೀಘ್ರ ಫಲ

ಕಮಲದ ಹೂವು ನಮ್ಮ ಪ್ರಾಚೀನ ವೇದಗಳಲ್ಲಿ, ಪುರಾಣಗಳಲ್ಲಿ ಉಲ್ಲೇಖವಿರುವ ಹೂವು. ಈಗಲೂ ಈ ಹೂವು ಬಳಕೆಯಲ್ಲಿದೆ. ಲಕ್ಷ್ಮಿಯ ಮುಖವನ್ನು ಕಮಲಕ್ಕೆ ಹೋಲಿಸಲಾಗುತ್ತದೆ. ಭಾರತೀಯ ಸಂಸ್ಕತಿಯಲ್ಲಿ ಕಮಲಕ್ಕೆ ವಿಶೇಷ ಸ್ಥಾನವಿದೆ. ಕಮಲದ ಹೂವು ಸೃಷ್ಟಿಯ ಸಂಕೇತ. ಕಮಲದ ಹೂವನ್ನು ಹೆಣ್ಣಿನ ಗರ್ಭಕ್ಕೆ ಹೋಲಿಸಲಾಗಿದೆ.

ವಿಷ್ಣುವಿನ ನಾಭಿಯಿಂದ ಬಳ್ಳಿಯಂತೆ ಕಮಲದ ಹೂವು ಹೊಮ್ಮಿ ಅದರ ಮೇಲೆ ಬ್ರಹ್ಮದೇವ ಕುಳಿತಿರುವ ಚಿತ್ರವನ್ನು ಗಮನಿಸಿರಬಹುದು. ಕಮಲ ಸೃಷ್ಠಿಯ ಸಂಕೇತ. ಹಾಗಾಗಿ ಕನಸಿನಲ್ಲಿ ಕಮಲದ ಹೂವು ಕಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಸಂತಾನಕ್ಕಾಗಿ ಹಂಬಲಿಸುವ ದಂಪತಿಗಳು ಕಮಲದ ಹೂವಿಂದ ಪೂಜಿಸಿದರೆ ಶೀಘ್ರ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಮಲದ ಹೂವು ಪೂಜೆಗಷ್ಟೇ ಅಲ್ಲ, ಔಷಧಿಯಾಗಿ ಬಳಕೆಯಲ್ಲಿದೆ. ಕಮಲದ ಹೂವಿನ ಪ್ರತಿ ಭಾಗವೂ ಔಷಧೀಯ ಗುಣಗಳನ್ನು ಹೊಂದಿರುವುದು ವಿಶೇಷ.

For Latest News Updates, Join Our Whatsapp Community🚩
RELATED ARTICLES

Most Popular