ನವದೆಹಲಿ: ಇನ್ನು ನಾಲ್ಕು ತಿಂಗಳಲ್ಲಿ ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ತಡೆರಹಿತ ಟೋಲ್ ಪ್ಲಾಜಾ ಅಸ್ತಿತ್ವಕ್ಕೆ ಬರಲಿವೆ.
ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ದೆಹಲಿಯ ಅರ್ಬನ್ ಎಕ್ಸ್ ಟೆನ್ಷನ್ ರಸ್ತೆ -2ರಲ್ಲಿ ದೇಶದ ಎರಡನೇ ತಡೆರಹಿತ ಟೋಲ್ ಪ್ಲಾಜಾಗೆ ಚಾಲನೆ ನೀಡಿ ಅವರು ಮಾತನಾಡಿ, ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 17 ಸ್ಥಳಗಳಲ್ಲಿ ಈ ವರ್ಷದ ಸೆಪ್ಟೆಂಬರ್ ಒಳಗೆ ತಡೆರಹಿತ ಟೋಲ್ ಪ್ಲಾಜಾಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಹೇಳಿದ್ದಾರೆ.
ತಡೆರಹಿತ ಟೋಲ್ ಪ್ಲಾಜಾಗಳ ಅತ್ಯಾಧುನಿಕ ವ್ಯವಸ್ಥೆಯಲ್ಲಿ ವಾಹನಗಳು ಟೋಲ್ ಪಾವತಿಸಲು ಪ್ಲಾಜಾಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ANPR ಮತ್ತು ಫಾಸ್ಟ್ಯಾಗ್ ತಂತ್ರಜ್ಞಾನದ ಮೂಲಕ ಚಲಿಸುತ್ತಿರುವಾಗಲೇ ಹಣ ಕಡಿತವಾಗುತ್ತದೆ. ಇದರಿಂದ ಇಂಧನ ಮತ್ತು ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.

