HomeKarnatakaSDA ರುದ್ರೇಶ್ ಆತ್ಮಹತ್ಯೆ ಪ್ರಕರಣ: ಸ್ಪೋಟಕ ಅಂಶಗಳ ಉಲ್ಲೇಖಿಸಿ ಸಿಬಿಐ ತನಿಖೆ ಕೋರಿ ರಾಷ್ಟ್ರಪತಿಗೆ ಪತ್ರ

SDA ರುದ್ರೇಶ್ ಆತ್ಮಹತ್ಯೆ ಪ್ರಕರಣ: ಸ್ಪೋಟಕ ಅಂಶಗಳ ಉಲ್ಲೇಖಿಸಿ ಸಿಬಿಐ ತನಿಖೆ ಕೋರಿ ರಾಷ್ಟ್ರಪತಿಗೆ ಪತ್ರ

ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲಿ ಎಸ್.ಡಿ.ಎ. ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಸಿಬ್ಬಂದಿಯ ಹೆಸರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.

ಆತ್ಮಹತ್ಯೆಗೆ ತಹಶೀಲ್ದಾರ್, ಕೆಲ ಸಿಬ್ಬಂದಿ ಕಾರಣವೆಂದು ಉಲ್ಲೇಖಿಸಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಸೂಚಿಸುವಂತೆ ನೊಂದ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದೇ ಪತ್ರದಲ್ಲಿ ಇನ್ನೂ ಎರಡು ಆತ್ಮಹತ್ಯೆ ವಿಚಾರಗಳನ್ನು ಕೂಡ ಪ್ರಸ್ತಾಪಿಸಲಾಗಿದೆ.

ಎಸ್.ಡಿ.ಎ. ರುದ್ರೇಶ್ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ. ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಕೆಲವು ಸಿಬ್ಬಂದಿ ಬೆಂಬಲ ನೀಡುತ್ತಿದ್ದಾರೆ. ಪ್ರಕರಣದ ತನಿಖೆಯ ತನಿಕೆಯ ದಿಕ್ಕು ತಪ್ಪಿಸಲು ಕೆಲವು ಸಿಬ್ಬಂದಿ ಯತ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಮ ಆಡಳಿತಾಧಿಕಾರಿಗಳಾದ ಎಸ್.ಪಿ. ಶಿಂಧೆ, ಕಿರಣ್ ತೋರಗಲ್, ಬಸನಗೌಡ ಪಾಟೀಲ್, ಸುರೇಖಾ ನೇರಲಿ ವಿರುದ್ಧ ಆರೋಪ ಮಾಡಲಾಗಿದೆ. ಸಿಬ್ಬಂದಿಗೆ ಏನೂ ಗೊತ್ತಿಲ್ಲ ಎನ್ನುವಂತೆ ಹೇಳಿಕೆ ನೀಡಲು ಒತ್ತಡ ಹೇರುತ್ತಿರುವುದಾಗಿ ಆರೋಪಿಸಲಾಗಿದೆ.

ಈ ಹಿಂದೆ ಕೆಲಸ ಮಾಡುತ್ತಿದ್ದ ಪ್ರದೀಪ್ ಪಾಟೀಲ್ ಆತ್ಮಹತ್ಯೆ ಆಗಿತ್ತು. ಅವರ ಆತ್ಮಹತ್ಯೆಗೂ ಸುರೇಖಾ ಕಾರಣವೆಂದು ಆರೋಪಿಸಲಾಗಿದೆ. ಪ್ರದೀಪ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಎಸ್.ಪಿ. ಶಿಂಧೆ, ತಹಶೀಲ್ದಾರ್ ವಾಹನ ಚಾಲಕ ಯಲ್ಲಪ್ಪ ಪ್ರಕರಣ ಮುಚ್ಚಿ ಹಾಕಿದ್ದಾರೆ. ಜವಾನ ಪ್ರದೀಪ್ ಸಾವಿನ ಕುರಿತು ಕೂಡ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ತಹಶೀಲ್ದಾರ್ ಗೆ ಜಾಮೀನು ದೊರೆತ ದಿನ ಗ್ರಾಮ ಆಡಳಿತಾಧಿಕಾರಿ ಶಿಂಧೆ ತನ್ನ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದರು. ಶಿಂಧೆ ಬಗ್ಗೆ ಪ್ರಶ್ನಿಸುವ ಕೆಲವು ಸಿಬ್ಬಂದಿಗೆ ತಹಶೀಲ್ದಾರ್ ಮೂಲಕ ಕಿರುಕುಳ ನೀಡಲಾಗುತ್ತಿದೆ. ಘಟನೆ ನಡೆದ ದಿನದಿಂದ ಕಿರಣ್ ತೋರಗಲ್ ಕಚೇರಿಗೆ ಬಂದಿರುವುದಿಲ್ಲ. ತಹಶೀಲ್ದಾರ್ ಅವರಿಗೆ ಶಿಂಧೆ, ಬಸನಗೌಡ ಪಾಟೀಲ್ ಬಲಗೈ ಬಂಟರಂತೆ ಇದ್ದಾರೆ. ಜಾಮೀನು ಕೊಡಿಸಲು ಶಿಂಧೆ ಅವರೇ ಹಣ ನೀಡಿದ್ದಾರೆ.

ಅಷ್ಟೇ ಗ್ರಾಮದ ಜಮೀನು ಮಾಲೀಕ ಮಹೇಶ ಚೌಗಲೆ ಆತ್ಮಹತ್ಯೆ ನಡೆದಿದೆ. ಮೃತ ಮಹೇಶ್ ಅಷ್ಟೇ ಗ್ರಾಮದ ರೀ ಸರ್ವೇ ನಂಬರ್ 82/ಬಿ1 ಜಮೀನು ಮಾಲೀಕರಾಗಿದ್ದಾರೆ. ಆತ್ಮಹತ್ಯೆಗೆ ಬಸನಗೌಡ ಪಾಟೀಲ್, ಶ್ರೀಕಾಂತ ಹೈಗರ್ ಕಾರಣ. ಮಹೇಶ ಚೌಗಲೆ ಸಾವಿನ ಬಗ್ಗೆ ದೂರು ನೀಡಿದ್ದರೂ ವಿಚಾರಣೆ ನಡೆದಿಲ್ಲ. ಅವರ ಸಾವಿನ ಬಗ್ಗೆಯೂ ತನಿಖೆ ನಡೆಸಬೇಕೆಂದು ಉಲ್ಲೇಖಿಸಲಾಗಿದೆ.

ಪ್ರಕರಣಗಳಲ್ಲಿ ರಾಜಕೀಯ ಒತ್ತಡ ಇರುವುದರಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕು. ನೊಂದ ಕುಟುಂಬಗಳಿಗೆ ನ್ಯಾಯ ಕೊಡಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ನೊಂದ ಸಿಬ್ಬಂದಿ ಹೆಸರಲ್ಲಿ ರಾಷ್ಟ್ರಪತಿಗೆ ಪತ್ರ ಬರೆದು ಉಲ್ಲೇಖಿಸಲಾಗಿದೆ. ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಹಲವು ಸ್ಪೋಟಕ ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ನವೆಂಬರ್ 5 ರಂದು ತಹಶೀಲ್ದಾರ್ ಕಚೇರಿಯಲ್ಲಿ ಎಸ್.ಡಿ.ಎ. ರುದ್ರೇಶ್ ಆತ್ಮಹತ್ಯೆ ನಡೆದಿತ್ತು. ತಹಶೀಲ್ದಾರ್ ಬಸವರಾಜ ನಾಗರಾಳ ಎಫ್.ಡಿ.ಎ. ಅಶೋಕ ಕಬ್ಬಲಿಗೇರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎ ಸೋಮು ವಿರುದ್ಧ ಪ್ರಕರಣ ದಾಖಲಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular