HomeLive NewsSHOCKING: ವಿದ್ಯಾರ್ಥಿಗಳ ಎದುರಲ್ಲೇ ಕ್ಲಾಸ್ ರೂಂ ನಲ್ಲಿ ಹೊಡೆದಾಡಿಕೊಂಡ ಪ್ರಾಂಶುಪಾಲ-ಶಿಕ್ಷಕಿ

SHOCKING: ವಿದ್ಯಾರ್ಥಿಗಳ ಎದುರಲ್ಲೇ ಕ್ಲಾಸ್ ರೂಂ ನಲ್ಲಿ ಹೊಡೆದಾಡಿಕೊಂಡ ಪ್ರಾಂಶುಪಾಲ-ಶಿಕ್ಷಕಿ

ಬೆಂಗಳೂರು: ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡಬೇಕಾದ ಶಿಕ್ಷಕರೇ ಹೊಡೆದಾಡಿಕೊಂಡರೆ ಹೇಗೆ? ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಇಂತದ್ದೇ ಘಟನೆ ನಡೆದಿದ್ದು, ಶಿಕ್ಷಕರ ಹೊಡೆದಾಟ ಕಂಡು ವಿದ್ಯಾರ್ಥಿಗಳು ದಂಗಾಗಿದ್ದಾರೆ.

ಬಡ್ತಿ ವಿಚಾರವಾಗಿ ಪ್ರಾಂಶುಪಾಲ ಹಾಗೂ ಶಿಕ್ಷಕಿ ನಡುವೆ ಗಲಾಟೆ ನಡೆದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಬಸವನಗುಡಿ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಲೆಯ ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಮತ್ತು ಶಿಕ್ಷಕಿ ರೇಷ್ಮಾ ನಡುವೆ ಗಲಾಟೆ ನಡೆದಿದೆ. ಶಿಕ್ಷಕಿ ರೇಷ್ಮಾ ಅವರ ಕಾರ್ಯವೈಖರಿಯನ್ನು ಮೆಚ್ಚಿ ಶಾಲಾ ಆಡಳಿತ ಮಂಡಳಿಯು ಅವರಿಗೆ ಬಡ್ತಿ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ಇದು ಪ್ರಿನ್ಸಿಪಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಪ್ರಿನ್ಸಿಪಾಲ್ ಕಡೆಯವರು ಹಾಗೂ ಶಿಕ್ಷಿಕಯ ಕಡೆಯವರು ವಿದ್ಯಾರ್ಥಿಗಳ ಮುಂದೆಯೇ ಹೊಡೆದಾಡಿದ್ದಾರೆ.

ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಅವರು ಹೊರಗಿನ ಜನರನ್ನು ಕರೆಸಿ ತನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಶಿಕ್ಷಕಿ ರೇಷ್ಮಾ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular