HomeIndiaಶಾಲಾ ಬಸ್ ಭೀಕರ ಅಪಘಾತ: ಶಿಕ್ಷಕಿ ದುರ್ಮರಣ; 15 ಮಕ್ಕಳಿಗೆ ಗಾಯ

ಶಾಲಾ ಬಸ್ ಭೀಕರ ಅಪಘಾತ: ಶಿಕ್ಷಕಿ ದುರ್ಮರಣ; 15 ಮಕ್ಕಳಿಗೆ ಗಾಯ

ಜೈಪುರ: ಶಾಲಾ ಬಸ್ ಭೀಕರ ಅಪಘಾತಕ್ಕೀಡಾಗಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿದ್ದು, 15 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರದ ಚೋಮುವಿನಲ್ಲಿ ನಡೆದಿದೆ.

ಬಸ್ ನಲ್ಲಿ ಸುಮಾರು 30 ವಿದ್ಯಾರ್ಥಿಗಳು ಇದ್ದರು. ವೇಗವಾಗಿ ಬಂದ ಶಾಲಾ ಬಸ್ ನಿಯಂತ್ರಣ ಕಳೆದುಕೊಂಡು ನಿರ್ಮಣ ಹಂತದ ಬ್ರಿಡ್ಜ್ ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಓರ್ವ ಶಿಕ್ಷಕಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 15 ಮಕ್ಕಳಿಗೆ ಗಾಯಗಳಾಗಿವೆ.

ಬಸ್ಸಿನ ಬ್ರೇಕ್ ಫೇಲ್ ಆಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯವೂ ಘಟನೆಗೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಅರು ದೌಡಾಯಿಸಿ ಪರಿಶೀಲನೆ ನ್ಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular