HomeKarnatakaBIG NEWS : ಕಲಬುರಗಿಯಲ್ಲಿ ಘೋರ ಘಟನೆ : ಶಾಲಾ ಬಸ್ ಹರಿದು ಸ್ಥಳದಲ್ಲೇ 3...

BIG NEWS : ಕಲಬುರಗಿಯಲ್ಲಿ ಘೋರ ಘಟನೆ : ಶಾಲಾ ಬಸ್ ಹರಿದು ಸ್ಥಳದಲ್ಲೇ 3 ವರ್ಷದ ಬಾಲಕಿ ಸಾವು

ಕಲಬುರಗಿ: ಶಾಲಾ ಬಸ್ ಡಿಕ್ಕಿ ಹೊಡೆದು ಭೀಕರ ಅಪಘಾತದಲ್ಲಿ ಮೂರು ವರ್ಷದ ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ಖುಷಿ ಬನ್ನಟ್ಟಿ (3) ಮೃತ ಬಾಲಕಿ. ರಾಜಶೇಖರ್ ಎಂಬುವವರ ಪುತ್ರಿ. ಸ್ಕೂಲ್ ಬಸ್ ನಲ್ಲಿ ಅಣ್ಣ ಬಂದಿದ್ದಾನೆ ಎಂದು ಆತನನ್ನು ಕರೆಯಲೆಂದು ಬಾಲಕಿ ತಂದೆಯ ಹಿಂದೆ ಹೋಗಿದ್ದಾಳೆ. ಆದರೆ ತಂದೆ ಮಗು ಬಂದಿರುವುದನ್ನು ಗಮನಿಸಿಲ್ಲ. ಇದೇ ವೇಳೆ ಶಾಲಾ ವಾಹನ ಚಾಲಕ ಬಸ್ ಹಿಂತೆಗೆದುಕೊಂಡಿದ್ದಾನೆ. ಬಸ್ ಚಕ್ರದಡಿ ಬಾಲಕಿ ಸಿಲುಕಿದ್ದು, ಆಕೆಯ ತಲೆಯ ಮೇಲೆಯೇ ವಾಹನ ಹರಿದು ಹೋಗಿದೆ.

ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಚಾಲಕ ಶ್ರೀಶೈಲ್ ನನ್ನು ಪೊಲಿಸರು ಬಂಧಿಸಿದ್ದಾರೆ. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular