HomeBusinessಇಎಂಐ ಕಟ್ಟದ ಸಾಲಗಾರರಿಗೆ ಸ್ವೀಟ್, ಚಾಕೊಲೇಟ್ ಪ್ಯಾಕ್ ಗಿಫ್ಟ್: ಮನೆ ಬಾಗಿಲಿಗೆ ಬಂದು ಸಾಲ ವಸೂಲಿಗೆ...

ಇಎಂಐ ಕಟ್ಟದ ಸಾಲಗಾರರಿಗೆ ಸ್ವೀಟ್, ಚಾಕೊಲೇಟ್ ಪ್ಯಾಕ್ ಗಿಫ್ಟ್: ಮನೆ ಬಾಗಿಲಿಗೆ ಬಂದು ಸಾಲ ವಸೂಲಿಗೆ SBI ವಿನೂತನ ಐಡಿಯಾ

ಮುಂಬೈ: ಸಾಲ ವಸೂಲಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿನೂತನ ಐಡಿಯಾ ಮಾಡಿಕೊಂಡಿದ್ದು, ಪ್ರಯೋಗ ಯಶಸ್ವಿಯಾಗಿದೆ.

ಬ್ಯಾಂಕ್ ನಿಂದ ಸಾಲ ಪಡೆದುಕೊಂಡು ಇಎಂಐ ಪಾವತಿಸಲು ಹಿಂದೇಟು ಹಾಕುವ ಗ್ರಾಹಕರಿಂದ ಸಾಲ ವಸೂಲಿ ಮಾಡಲು ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಚಾಕೊಲೇಟ್ ಪ್ಯಾಕ್ ಉಡುಗೊರೆ ನೀಡುವ ಮೂಲಕ ಮನವೊಲಿಸಲು ಎಸ್.ಬಿ.ಐ. ಮುಂದಾಗಿದೆ. ಇದಕ್ಕೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಬಡ್ಡಿದರ ಏರಿಕೆಯಾದ ನಂತರ ಇಎಂಐ ಪಾವತಿಸದ ಗ್ರಾಹಕರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಸಾಮಾನ್ಯವಾಗಿ ಇಎಂಐ ಪಾವತಿಸುವಂತೆ ಬ್ಯಾಂಕ್ ನವರು ನೆನಪಿಸುವ ಕರೆಯನ್ನು ಸಾಲ ಪಡೆದ ಗ್ರಾಹಕರು ಸ್ವೀಕರಿಸುವುದಿಲ್ಲ. ಅಂತಹ ಗ್ರಾಹಕರ ಮನವೊಲಿಕೆಗೆ ಚಾಕೊಲೇಟ್ ಪ್ಯಾಕ್ ಹಿಡಿದುಕೊಂಡು ಅಧಿಕಾರಿಗಳು ಹೋಗುತ್ತಿದ್ದಾರೆ. ಚಾಕೊಲೇಟ್ ಕೊಟ್ಟು ಇಎಂಐ ಪಾವತಿಸುವಂತೆ ಗ್ರಾಹಕರಿಗೆ ತಿಳಿಸುತ್ತಿದ್ದು, ಈ ಪ್ರಕ್ರಿಯೆಗೆ ಸಾಲಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular