HomeBusinessSBI ಹೊಸ ಧಮಾಕಾ: ದಿನಕ್ಕೆ ₹8 ಉಳಿಸಿ ನಿಮ್ಮ ಮಗುವನ್ನು ಕೋಟ್ಯಾಧಿಪತಿ ಮಾಡಿ ಏನಿದು ಜನ್...

SBI ಹೊಸ ಧಮಾಕಾ: ದಿನಕ್ಕೆ ₹8 ಉಳಿಸಿ ನಿಮ್ಮ ಮಗುವನ್ನು ಕೋಟ್ಯಾಧಿಪತಿ ಮಾಡಿ ಏನಿದು ಜನ್ ನಿವೇಶ್ ಯೋಜನೆ?

ಇತ್ತೀಚಿನ ದಿನಗಳಲ್ಲಿ ಸಣ್ಣ ಉಳಿತಾಯಗಾರರಿಗೆ ಮ್ಯೂಚುವಲ್ ಫಂಡ್‌ಗಳ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಅತ್ಯಂತ ಸುರಕ್ಷಿತ ಹಾಗೂ ಜನಪ್ರಿಯ ಆಪ್ಷನ್ ಆಗಿ ಹೊರಹೊಮ್ಮಿದೆ. ಭವಿಷ್ಯದ ದೊಡ್ಡ ನಿಧಿಗಾಗಿ ಸಾಮಾನ್ಯವಾಗಿ ₹500 ರಿಂದ SIP ಆರಂಭಿಸಬಹುದು. ಆದರೆ, ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಗ್ರಾಹಕರಿಗಾಗಿ ಅತ್ಯಂತ ವಿಶಿಷ್ಟವಾದ ಎಸ್‌ಬಿಐ ಜನ್ ನಿವೇಶ್ ಎಸ್‌ಐಪಿ (SBI Jan Nivesh SIP) ಯೋಜನೆಯನ್ನು ಪರಿಚಯಿಸಿದೆ.

ಇದರ ಅಡಿಯಲ್ಲಿ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ದಿನಕ್ಕೆ ಕೇವಲ ₹8 (ತಿಂಗಳಿಗೆ ₹250) ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ಲಕ್ಷಾಂತರ ರೂಪಾಯಿಗಳ ಬೃಹತ್ ನಿಧಿ ನಿರ್ಮಿಸಬಹುದು. ಈ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ:

ಹೈಬ್ರಿಡ್ ಫಂಡ್‌ನಲ್ಲಿ ಹೂಡಿಕೆಯಾಗಲಿದೆ ನಿಮ್ಮ ಹಣ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಂಟಿ ವಿನ್ಯಾಸ: ಎಸ್‌ಬಿಐ ಮ್ಯೂಚುವಲ್ ಫಂಡ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಈ ಯೋಜನೆಯನ್ನು ರೂಪಿಸಿವೆ.

ಮುಖ್ಯ ಉದ್ದೇಶ: ಗ್ರಾಮೀಣ, ಅರೆ ನಗರ ಮತ್ತು ನಗರ ಪ್ರದೇಶಗಳ ಮೊದಲ ಬಾರಿಗೆ ಹೂಡಿಕೆ ಮಾಡುವ ಸಣ್ಣ ಉಳಿತಾಯಗಾರರನ್ನು ಮ್ಯೂಚುವಲ್ ಫಂಡ್ ಲೋಕಕ್ಕೆ ತರುವುದು ಇದರ ಗುರಿ.

ಸುರಕ್ಷಿತ ಹೂಡಿಕೆ: ಈ ಯೋಜನೆಯ ಹಣವನ್ನು ನೇರವಾಗಿ ‘ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್’ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಷೇರು ಮಾರುಕಟ್ಟೆ (Equity) ಮತ್ತು ಸಾಲ (Debt) ಎರಡರಲ್ಲೂ ಸಮಾನವಾಗಿ ಹೂಡಿಕೆ ಮಾಡುವ ಸುರಕ್ಷಿತ ಹೈಬ್ರಿಡ್ ಫಂಡ್ ಆಗಿದೆ.

ಫಂಡ್ ಮ್ಯಾನೇಜರ್‌ಗಳ ಸ್ಮಾರ್ಟ್ ನಿರ್ವಹಣೆ

ಹೂಡಿಕೆದಾರರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕ ಹೂಡಿಕೆ ಆಯ್ಕೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ.

ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸಿ ಅನುಭವಿ ಫಂಡ್ ಮ್ಯಾನೇಜರ್‌ಗಳೇ (Fund Managers) ಹಣವನ್ನು ನಿರ್ವಹಿಸುವುದರಿಂದ ಇಲ್ಲಿ ರಿಸ್ಕ್ ಪ್ರಮಾಣ ತೀರಾ ಕಡಿಮೆ ಇರುತ್ತದೆ.

ಕೇವಲ ₹250 ರಿಂದ ₹17 ಲಕ್ಷದ ಭರ್ಜರಿ ನಿಧಿ

ಪ್ರತಿ ತಿಂಗಳು ಕೇವಲ ₹250 (ದಿನಕ್ಕೆ ಅಂದಾಜು ₹8) ಹೂಡಿಕೆ ಮಾಡುತ್ತಾ ಹೋದರೆ, ಮಾರುಕಟ್ಟೆಯ ಟ್ರೆಂಡ್ ಪ್ರಕಾರ ಶೇಕಡಾ 12 ರಿಂದ 16 ರಷ್ಟು ಆದಾಯ ಸಿಗುವ ನಿರೀಕ್ಷೆಯಿದೆ.

ಒಂದು ವೇಳೆ ಪೋಷಕರು ತಮ್ಮ ಮಗುವಿನ ಹೆಸರಿನಲ್ಲಿ ಸತತವಾಗಿ 30 ವರ್ಷಗಳ ಕಾಲ ಈ ಹಣವನ್ನು ಠೇವಣಿ ಇಡುತ್ತಾ ಬಂದರೆ, ಶೇ. 15 ರಷ್ಟು ಕಾಂಪೌಂಡಿಂಗ್ ಬಡ್ಡರದಲ್ಲಿ ಮುಕ್ತಾಯದ ವೇಳೆಗೆ ಬರೋಬ್ಬರಿ ₹17.30 ಲಕ್ಷ ರೂಪಾಯಿ ನಿಮ್ಮ ಕೈ ಸೇರಲಿದೆ.

40 ವರ್ಷ ಮುಂದುವರಿಸಿದರೆ ₹78 ಲಕ್ಷದ ಬಂಪರ್
ಈ ಲಾಂಗ್ ಟರ್ಮ್ ಹೂಡಿಕೆಯನ್ನು ಮತ್ತೊಂದು 10 ವರ್ಷ ಹೆಚ್ಚಿಸಿ, ಒಟ್ಟು 40 ವರ್ಷಗಳ ಸುದೀರ್ಘ ಅವಧಿಗೆ ಕಾಂಪೌಂಡಿಂಗ್ ಲಾಭ ಪಡೆಯಲು ಬಿಟ್ಟರೆ, ನಿಮ್ಮ ಖಾತೆಯಲ್ಲಿ ಬರೋಬ್ಬರಿ ₹78 ಲಕ್ಷ ರೂಪಾಯಿಗಳವರೆಗೆ ಬೃಹತ್ ನಿಧಿ ಅತ್ಯಂತ ಸುಲಭವಾಗಿ ಸಂಗ್ರಹವಾಗುತ್ತದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular