
ಆಪಲ್ ಸೀಡರ್ ವಿನೆಗರ್ : ತಲೆಹೊಟ್ಟನ್ನ ನಿವಾರಿಸುವಲ್ಲಿ ಆಪಲ್ ಸೀಡರ್ ವಿನಗರ್ ಪ್ರಮುಖ ಪಾತ್ರ ವಹಿಸುತ್ತೆ. ಇದರಿಂದ ತಲೆ ಹೊಟ್ಟು ನಿವಾರಣೆ ಆಗೋದ್ರ ಜೊತೆಗೆ ಕೂದಲು ಕೂಡ ಬಲಶಾಲಿಯಾಗಲಿದೆ.
ಅರ್ಧ ಚಮಚ ಆಪಲ್ ವಿನೇಗರ್ಗೆ ಒಂದು ಲೋಟ ನೀರನ್ನ ಮಿಶ್ರಣ ಮಾಡಿ. ಈಗ ತಲೆ ಸ್ನಾನ ಮಾಡಿ ಬಳಿಕ ಇದನ್ನ ಕ್ಲೆನ್ಸರ್ ರೀತಿಯಲ್ಲಿ ಬಳಕೆ ಮಾಡಿ. ಇದಕ್ಕೆ ನೀವು ರೋಸ್ ವಾಟರ್ನ್ನೂ ಮಿಕ್ಸ್ ಮಾಡೋದ್ರಿಂದ ಒಳ್ಳೆಯ ಸುಗಂಧ ಬರಲಿದೆ. ಹಾಗೂ ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಈ ರೀತಿ ಮಾಡೋದ್ರಿಂದ ಹೊಟ್ಟಿನ ಸಮಸ್ಯೆ ಕ್ರಮೇಣವಾಗಿ ವಾಸಿಯಾಗಲಿದೆ.

