HomeLatest NewsBIG NEWS: ಕ್ರಾಂತಿ ಮಾಡೋದು ಬಿಡೋದು ಹೈಕಮಾಂಡ್ ಕೈಲಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ

BIG NEWS: ಕ್ರಾಂತಿ ಮಾಡೋದು ಬಿಡೋದು ಹೈಕಮಾಂಡ್ ಕೈಲಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ದೆಹಲಿಗೆ ಭೇಟಿ ನೀಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ. ಸಿಎಂ ಜೋತೆ ಹೋಗಿದ್ದೆವು ಬಂದೆವು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯ ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸೆಪ್ಟೆಂಬರ್ ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂದು ಹೇಳಿಕೆ ನೀಡಿರುವ ಸಚಿವ ರಾಜಣ್ಣ ಹೇಳಿಕೆಗೆ, ಈ ಬಗ್ಗೆ ಅವರೂ ಹೇಳಿದ್ದಾರೆ, ನಾವೂ ಕೂಡ ಹೇಳಿದ್ದೆವೆ ಅಲ್ಲಿಗೆ ಅದು ಮುಗಿಯಿತು. ಎಲ್ಲದಕ್ಕೂ ವರಿಷ್ಠರಿದ್ದಾರೆ ಅವರು ನೋಡ್ತಾರೆ. ಕ್ರಾಂತಿ ಮಾಡೋದು ಬಿಡೋದು ವರಿಷ್ಠರ ಕೈಯಲ್ಲಿದೆ ಎಂದು ಹೇಳಿದರು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದೇ ನಿರ್ಧಾರ ಕೈಗೊಂಡರೂ ವರಿಷ್ಠರೇ ಕೈಗೊಳ್ಳಬೇಕು. ನಾವು ಅದರಲ್ಲಿ ಒಂದು ಭಾಗವಷ್ಟೇ ಎಂದು ಹೇಳಿದರು. ಇನ್ನು ಮುಂದಿನ ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಆಗಬಹುದು ಎಂಬ ರಾಜಣ್ಣ ಹೇಳಿಕೆಗೆ, ಅದು ಅವರ ವೈಯಕ್ತಿಕ ವಿಚಾರ. ಅವರು ಹಲವು ಬಾರಿ ಈ ರೀತಿ ಹೇಳಿದ್ದಾರೆ, ಮುಂದೆ ನೋಡೋಣ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular