HomeEntertainmentಪಾರ್ಟಿಯಲ್ಲಿ ಹುಡುಗಿಯನ್ನು ಕೆಳಗೆ ತಳ್ಳಿದ್ರಾ ನಟಿ ಸಾರಾ ಅಲಿ ಖಾನ್? ಓರಿ ನೀಡಿದ ಶಾಕಿಂಗ್ ಹೇಳಿಕೆ...

ಪಾರ್ಟಿಯಲ್ಲಿ ಹುಡುಗಿಯನ್ನು ಕೆಳಗೆ ತಳ್ಳಿದ್ರಾ ನಟಿ ಸಾರಾ ಅಲಿ ಖಾನ್? ಓರಿ ನೀಡಿದ ಶಾಕಿಂಗ್ ಹೇಳಿಕೆ ಇಲ್ಲಿದೆ

ಬಾಲಿವುಡ್ ಮಂದಿಯ ನೆಚ್ಚಿನ ಸ್ನೇಹಿತ, ಸೋಶಿಯಲ್ ಮೀಡಿಯಾ ಸೆನ್ಸೇಷನ್ ಓರಿ ಉರ್ಫ್ ಓರ್ಹಾನ್ ಅವತ್ರಮಣಿ ಮತ್ತು ನಟಿ ಸಾರಾ ಅಲಿ ಖಾನ್ ನಡುವಿನ ಮನಸ್ತಾಪದ ಸುದ್ದಿ ಈಗ ಮತ್ತೆ ಸದ್ದು ಮಾಡುತ್ತಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಓರಿ, ಸಾರಾ ಅಲಿ ಖಾನ್ ಜೊತೆಗಿನ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡು ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಾರ್ಟಿಯೊಂದರಲ್ಲಿ ನಡೆದ ಪ್ರಸಂಗವನ್ನು ವಿವರಿಸಿದ ಓರಿ, ಅಲ್ಲಿ ಕುಳಿತುಕೊಳ್ಳಲು ಜಾಗ ಹುಡುಕುತ್ತಿದ್ದಾಗ ಸಾರಾ ಅಲಿ ಖಾನ್ ಕುರ್ಚಿಯಲ್ಲಿದ್ದ ಹುಡುಗಿಯೊಬ್ಬಳನ್ನು ಕೆಳಗೆ ತಳ್ಳಿದ್ದರು ಎಂದು ಹೇಳಿದ್ದಾರೆ. ಆದರೆ, ಆ ಸಮಯದಲ್ಲಿ ಸಾರಾ ಅತ್ಯಂತ ಜನಪ್ರಿಯ ನಟಿಯಾಗಿದ್ದರಿಂದ ಆ ಹುಡುಗಿ ಸಾರಾ ಅವರನ್ನು ಬಿಟ್ಟು ತನ್ನ ಮೇಲೆ ಕೋಪಗೊಂಡಿದ್ದಳು ಎಂದು ಓರಿ ತಿಳಿಸಿದ್ದಾರೆ. ನಾನು ಮಾಡದ ತಪ್ಪಿಗೆ ನಾನು ಬೈಗುಳ ತಿನ್ನಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ನಂತರ ಆ ಹುಡುಗಿ ತನ್ನ ಬಳಿ ಬಂದು ಮಾತನಾಡಿದಾಗ ತಮ್ಮ ವಿಚಿತ್ರ ಉಡುಪಿನ ಶೈಲಿಯಿಂದ ಆಕೆಯನ್ನು ಸಮಾಧಾನಪಡಿಸಿದ್ದಾಗಿ ಓರಿ ಹೇಳಿದ್ದಾರೆ. “ನೀವು ನನ್ನನ್ನು ಕುರ್ಚಿಯಿಂದ ತಳ್ಳಿದ್ದು ತಪ್ಪಾಯಿತು ಎಂದು ನನಗೆ ಗೊತ್ತು, ಪರವಾಗಿಲ್ಲ” ಎಂದು ಆ ಹುಡುಗಿ ಹೇಳಿದಾಗ, “ಅದು ತಪ್ಪಲ್ಲ, ಆದರೂ ಧನ್ಯವಾದ” ಎಂದು ತಾವಿಬ್ಬರೂ ವಿಷಯವನ್ನು ಅಲ್ಲಿಗೆ ಮುಗಿಸಿದ್ದಾಗಿ ಓರಿ ವಿವರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಓರಿ ಮತ್ತು ಸಾರಾ ಅಲಿ ಖಾನ್ ನಡುವೆ ಕಳೆದ ಕೆಲವು ಸಮಯದಿಂದ ಉತ್ತಮ ಬಾಂಧವ್ಯವಿಲ್ಲ. ಹಿಂದೆ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವಿನ ಶೀತಲ ಸಮರ ಮುನ್ನೆಲೆಗೆ ಬಂದಿದೆ. ಆದರೆ ಈ ಆರೋಪಗಳ ಬಗ್ಗೆ ನಟಿ ಸಾರಾ ಅಲಿ ಖಾನ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular