HomeKarnatakaBIG NEWS: ನಾವು ಹೋಮ್ ಮಿನಿಸ್ಟರ್ ಕಡೆಯವರು.....ಡಾ.ಜಿ.ಪರಮೇಶ್ವರ್ ಪರ ಬ್ಯಾಟ್ ಬೀಸಿದ ಸಚಿವ ಸಂತೋಷ್ ಲಾಡ್

BIG NEWS: ನಾವು ಹೋಮ್ ಮಿನಿಸ್ಟರ್ ಕಡೆಯವರು…..ಡಾ.ಜಿ.ಪರಮೇಶ್ವರ್ ಪರ ಬ್ಯಾಟ್ ಬೀಸಿದ ಸಚಿವ ಸಂತೋಷ್ ಲಾಡ್

ಬೆಂಗಳೂರು: ಅಧಿಕಾರ ಹಂಚಿಕೆ ವಿಚಾರದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತೆರೆ ಎಳೆದಿದ್ದರೂ ಅಲ್ಲಿ ಇಲ್ಲಿ ಕೆಲ ಸಚಿವರುಗಳು ಪರೋಕ್ಷ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ.

ಸಚಿವ ಸಂತೋಷ್ ಲಾಡ್ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಬ್ಯಾಟ್ ಬೀಸಿದ್ದು, ಶಾಸಕ ಕೋನರೆಡ್ಡಿ ಜೊತೆ ಚರ್ಚೆಯ ವೇಳೆ ನಾನು ಹೋಮ್ ಮಿನಿಸ್ಟರ್ ಕಡೆಯವನು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಸಂತೋಷ್ ಲಾಡ್, ಈಗ ಕೋನರೆಡ್ಡಿ ಜೊತೆ ಮಾತನಾಡುತ್ತಾ ನಾನು ಡಾ.ಪರಮೇಶ್ವರ್ ಕಡೆಯವನು. ಹೋಮ್ ಮಿನಿಸ್ಟರ್ ಕಡೆಯವನಾಗಿದ್ದರಿಂದ ನೀವು ನಮ್ಮನ್ನು ಚನ್ನಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ. ಇದೇ ವೇಳೆ ನಾನು ಸಿಎಂ ಶಾಸಕ ಎಂದು ಕೋನರೆಡ್ಡಿ ಕಿಚಾಯಿಸಿದ್ದಾರೆ.

ನೀವು ಯಾವ ಸಿಎಂ? ಹೋಮ್ ಮಿನಿಸ್ಟರ್ ಇದ್ದಲ್ಲೇ ಸಿಎಂ ಎಂದು ಸಂತೋಷ್ ಲಾಡ್ ಕಾಲೆಳೆದ ವಿಡಿಯೋ ವೈರಲ್ ಆಗಿದ್ದು, ಸಚಿವರು ಹಾಗೂ ಶಾಸಕರ ನಡುವಿನ ಸಂಭಾಷಣೆ ಭಾರಿ ಚರ್ಚೆಗೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular