HomeLatest Newsಮ್ಯಾಚ್ ಗೆಲ್ಲಿಸಿದ ಸಂಜು ಕೇವಲ ಯೇಸುಗೆ ನಮಿಸಲಿಲ್ಲ: ಕೋಮುಗಲಭೆ ಎಬ್ಬಿಸುವವರಿಗೆ ಮೈದಾನದಲ್ಲೇ ತಿರುಗೇಟು; 'ದಿ ರಿಯಲ್...

ಮ್ಯಾಚ್ ಗೆಲ್ಲಿಸಿದ ಸಂಜು ಕೇವಲ ಯೇಸುಗೆ ನಮಿಸಲಿಲ್ಲ: ಕೋಮುಗಲಭೆ ಎಬ್ಬಿಸುವವರಿಗೆ ಮೈದಾನದಲ್ಲೇ ತಿರುಗೇಟು; ‘ದಿ ರಿಯಲ್ ಕೇರಳ ಸ್ಟೋರಿ’

ನಿನ್ನೆ ( ಮಾರ್ಚ್ 1 ) ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಕಂಡು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಭಾರತ ಮಾರ್ಚ್ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್ ಆರಿಸಿಕೊಂಡು ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವಿಭಾಗದ ಉತ್ತಮ ಆಟದಿಂದಾಗಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಭಾರತಕ್ಕೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 19.2 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 199 ರನ್ ಕಲೆಹಾಕಿತು.

ಇನ್ನು ಈ ಗೆಲುವಿಗೆ ಪ್ರಮುಖ ಕಾರಣ ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಹಂತದವರೆಗೂ ನೆಲಕಚ್ಚಿ ನಿಂತು ಬೌಂಡರಿಗಳ ಸುರಿಮಳೆಗೈದು 50 ಎಸೆತಗಳಲ್ಲಿ ಅಜೇಯ 97 ರನ್ ಬಾರಿಸಿದ ಸಂಜು ಸ್ಯಾಮ್ಸನ್. ಹೀಗೆ ಪಂದ್ಯ ಶ್ರೇಷ್ಠ ಪಡೆದ ಸಂಜು ಸ್ಯಾಮ್ಸನ್ ಕೊನೆಯ ಬೌಂಡರಿ ಬಾರಿಸುತ್ತಿದ್ದಂತೆ ಮೈದಾನದಲ್ಲಿಯೇ ಬ್ಯಾಟ್ ಕೆಳಗೆ ಇಟ್ಟು, ಹೆಲ್ಮೆಟ್ ಕಳಚಿ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿದರು. ಆರಂಭದಲ್ಲಿ ಸಂಜು ಸಲ್ಲಿಸಿದ ಈ ಪ್ರಾರ್ಥನೆ ಯೇಸು ಕ್ರಿಸ್ತನಿಗೆ ಎಂದು ಎಲ್ಲರೂ ಭಾವಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಇದು ಕ್ರೈಸ್ತ ದೇವರಿಗೆ ಸಲ್ಲಿಸಿದ ಪ್ರಾರ್ಥನೆ ಮಾತ್ರ ಅಲ್ಲ. ಬದಲಾಗಿ ಅಲ್ಲಾ ಮತ್ತು ಹಿಂದೂ ದೇವರಿಗೂ ಸಹ ನಮಿಸಿದ್ದಾಗಿತ್ತು. ಹೌದು, ಸಂಜು ಎಲ್ಲಾ ಮೂರು ಧರ್ಮದ ದೇವರಿಗೂ ಮೈದಾನದಲ್ಲಿ ನಮಿಸಿ ಕೇರಳದ ಸಹಬಾಳ್ವೆಯನ್ನು ಸಾರಿದರು ಹಾಗೂ ಕೇರಳದ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಾ ಕೋಮುಗಲಭೆ ಎಬ್ಬಿಸುವವರಿಗೆ ತಿರುಗೇಟು ನೀಡಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular