HomeEntertainment'ಸಂಜು' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಸಂಜು’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಮನ್ವಿತ್ ಅಭಿನಯದ ಯತಿರಾಜ್ ನಿರ್ದೇಶನದ ‘ಸಂಜು’ ಚಿತ್ರದ ಲಿರಿಕಲ್ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ನನ ಸುಟ್ಟು ಹೋದವಳೇ’ ಎಂಬ ಈ ಹಾಡಿಗೆ ಅಭಿಷೇಕ್ ಎಂ ಆರ್ ಧ್ವನಿಯಾಗಿದ್ದು, ವಿಜಯ್ ಹರಿತ್ಸಾ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ನಿರ್ದೇಶಕ ಯತಿರಾಜ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ದಿಶಾ ಎಂಟರ್ಪ್ರೈಸಸ್ ಲಾಂಛನದಲ್ಲಿ ಸಂತೋಷ್ ಡಿಂಕಾ ಮಹಾದೇವಪ್ಪ ನಿರ್ಮಾಣ ಮಾಡಿದ್ದು, ಮನ್ವಿತ್ ಹಾಗೂ ರೇಖಾದಾಸ್ ಪುತ್ರಿ ಶ್ರಾವ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಇನ್ನುಳಿದಂತೆ ಸಂಗೀತಾ, ಚೇತನ್ ರಾಜ್, ತುಕಾಲಿ ಸಂತು, ಪ್ರಕಾಶ್, ನಾಗರತ್ನ, ಮಹಾಂತೇಶ್, ಮಂಜು ಕವಿ, ಉಳಿದ  ತಾರಾಂಗಣದಲ್ಲಿದ್ದಾರೆ. ವಿದ್ಯಾ ನಾಗೇಶ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಮದನ್ ಮತ್ತು ಹರಿಣಿ ಅವರ ನೃತ್ಯ ನಿರ್ದೇಶನವಿದ್ದು, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular