ನವದೆಹಲಿ-ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ‘ಜಿರಳೆ ಜನತಾ ಪಕ್ಷ’ (ಸಿಜೆಪಿ) ನೇತೃತ್ವದಲ್ಲಿ ನಡೆದ ಉದ್ರಿಕ್ತ ‘ಸಂಸದ್ ಚಲೋ’ ಪ್ರತಿಭಟನೆಯ ವೇಳೆ ಕರ್ತವ್ಯದಲ್ಲಿದ್ದು ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬವರ್ಗದವರು ಮಾಧ್ಯಮ ಮುಂದೆ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರತಿಭಟನೆಯು ಕೇವಲ ವಿದ್ಯಾರ್ಥಿಗಳ ಆಂದೋಲನವಾಗಿರದೆ, ಹಿಂಸಾಚಾರದ ರೂಪ ತಾಳಿತ್ತು ಎಂದು ಆರೋಪಿಸಿರುವ ಅವರು, ತಮ್ಮ ಪ್ರೀತಿಪಾತ್ರರ ರಕ್ಷಣೆ ಹಾಗೂ ನ್ಯಾಯಕ್ಕಾಗಿ ಬಲವಾದ ಒತ್ತಾಯ ಮಾಡಿದ್ದಾರೆ. ರಕ್ತಸಿಕ್ತ ಸಮವಸ್ತ್ರದ ಕಥೆಗಳು ಪತ್ರಿಕಾಗೋಷ್ಠಿಯಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿಗಳ ಕುಟುಂಬದವರು ಹಂಚಿಕೊಂಡ ವಿವರಗಳು ಕಲುಕುವಂತಿವೆ:
ಕುಟುಂಬಗಳ ನೋವಿನ ಕಥೆಗಳು
ಎಸಿಪಿಯವರ ಮಗನ ಕಣ್ಣೀರು:
ಕರ್ತವ್ಯದ ಮೇಲಿದ್ದ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಮಗ ಮಾತನಾಡಿ, ಘಟನೆಯ ಬಳಿಕ ತಮ್ಮ ತಂದೆ ಮನೆಗೆ ಬಂದ ಸ್ಥತಿಯನ್ನು ನೆನಪಿಸಿಕೊಂಡರು. “ನನ್ನ ತಂದೆಯ ಸಮವಸ್ತ್ರ ರಕ್ತದಲ್ಲಿ ತೊಯ್ದಿತ್ತು. ತಲೆಗೆ ಬಲವಾದ ಪೆಟ್ಟಾಗಿ, ಚಿಕಿತ್ಸೆಗಾಗಿ ತಲೆ ಬೋಳಿಸಿ ನಾಲ್ಕು ಹೊಲಿಗೆಗಳನ್ನು ಹಾಕಲಾಗಿತ್ತು. ಇದನ್ನು ನೋಡಿದ ನನಗೆ ತೀವ್ರ ಆಘಾತವಾಯಿತು” ಎಂದು ಭಾವುಕರಾದರು.
ಸಬ್-ಇನ್ಸ್‌ಪೆಕ್ಟರ್ ಕುಂಜಾಲ್ ಅನುಭವ:
ಎಸ್‌ಐ ಆಗಿ ಸೇವೆ ಸಲ್ಲಿಸುತ್ತಿರುವ ತಮ್ಮ ತಂದೆಯ ಪರಿಸ್ಥಿತಿಯನ್ನು ವಿವರಿಸಿದ ಕುಂಜಾಲ್, “ಪ್ರತಿ ರಾತ್ರಿ ಮನೆಗೆ ಬಂದಾಗ, ಇದು ವಿದ್ಯಾರ್ಥಿಗಳ ಪ್ರತಿಭಟನೆಯಂತೆ ಕಾಣುತ್ತಿಲ್ಲ, ಸಮಾಜವಿರೋಧಿ ಅಂಶಗಳು ಒಳಗೆ ನುಗ್ಗಿವೆ ಎಂದು ತಂದೆ ಆತಂಕ ವ್ಯಕ್ತಪಡಿಸುತ್ತಿದ್ದರು” ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮೇಲೆಯೇ ಬಿಂಬಿತವಾಗುತ್ತಿರುವ ತಪ್ಪಾದ ನಿರೂಪಣೆಗಳನ್ನು ಅವರು ತೀವ್ರವಾಗಿ ಖಂಡಿಸಿದರು
.ಎಎಎಸ್‌ಐ ಸೀಮಾ ಅವರ ಆತಂಕ
ಜುಲೈ 20ರಂದು ಕರ್ತವ್ಯಕ್ಕೆ ತೆರಳಿದ್ದ ತಮ್ಮ ಪತಿ (ಸಹಾಯಕ ಸಬ್-ಇನ್ಸ್‌ಪೆಕ್ಟರ್) ಸಂಜೆ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದು ತೀವ್ರ ಭಯಗೊಂಡಿದ್ದಾಗಿ ಸೀಮಾ ತಿಳಿಸಿದರು.
ಪ್ರತಿಭಟನಾಕಾರರು ಕಲ್ಲುಗಳು, ಹೂವಿನ ಕುಂಡಗಳು ಹಾಗೂ ಬೂಟುಗಳಿಂದ ನಡೆಸಿದ ದಾಳಿಯಲ್ಲಿ ತಮ್ಮ ಪತಿಯ ರಕ್ಷಣಾ ಹೆಲ್ಮೆಟ್ ಸಂಪೂರ್ಣ ನುಜ್ಜುಗುಜ್ಜಾಗಿದೆ ಎಂದು ಅವರು ಕಣ್ಣೀರಿಟ್ಟರು.
ಹಿಂಸಾಚಾರ ಮತ್ತು ತನಿಖೆ
ಕತೆಪ್ರತಿಭಟನೆಯ ಸಂದರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ 130ಕ್ಕೂ ಹೆಚ್ಚು ಪೊಲೀಸರು ಹಾಗೂ ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದರು. ಈ ಸಂಬಂಧ ದೆಹಲಿ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಮುಖ ಗುರುತಿಸುವಿಕೆ ಕ್ಯಾಮೆರಾಗಳ (FRS) ಮೂಲಕ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ.
ಆದರೆ, ಈ ಘಟನೆಯಲ್ಲಿ ಕೇವಲ ಒಂದು ಮಗ್ಗುಲನ್ನು ಮಾತ್ರ ಬಿಂಬಿಸಲಾಗುತ್ತಿದ್ದು, ದೇಶದ ಸಂಕೇತವಾದ ಸಂಸತ್ತು ಮತ್ತು ಕಾನೂನು ಸುವಸ್ಥೆಯನ್ನು ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸ್ ಸಿಬ್ಬಂದಿಯ ತ್ಯಾಗ ಹಾಗೂ ಅವರು ಎದುರಿಸಿದ ಹಲ್ಲೆಗಳ ಬಗ್ಗೆಯೂ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಗಾಯಗೊಂಡ ಅಧಿಕಾರಿಗಳ ಕುಟುಂಬಗಳು ಸಂಸತ್ತು ಹಾಗೂ ಸರ್ಕಾರದ ಮಟ್ಟದಲ್ಲಿ ಆಗ್ರಹಿಸಿವೆ.

