HomeBusinessಹಣದ ಬದಲು ಆಸ್ತಿ ಕೊಟ್ಟು ಮತ್ತೊಂದು ಆಸ್ತಿ ಪಡೆಯಬಹುದೇ? ಸೇಲ್ ಡೀಡ್ vs ಎಕ್ಸ್ಚೇಂಜ್ ಡೀಡ್...

ಹಣದ ಬದಲು ಆಸ್ತಿ ಕೊಟ್ಟು ಮತ್ತೊಂದು ಆಸ್ತಿ ಪಡೆಯಬಹುದೇ? ಸೇಲ್ ಡೀಡ್ vs ಎಕ್ಸ್ಚೇಂಜ್ ಡೀಡ್ ವಿವರ

ಬೆಂಗಳೂರು: ಪ್ರಾಚೀನ ಕಾಲದಲ್ಲಿ ವಿನಿಮಯ ಪದ್ಧತಿ ಅಥವಾ ಬಾರ್ಟರ್ ಸಿಸ್ಟಮ್ (Barter System) ಚಾಲ್ತಿಯಲ್ಲಿತ್ತು. ರಾಗಿ ಕೊಟ್ಟು ಭತ್ತ ಪಡೆಯುವ, ಅಕ್ಕಿ ಕೊಟ್ಟು ಬೇಳೆ ಪಡೆಯುವ ಕಾಲವದಾಗಿತ್ತು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದಕ್ಕೂ ಹಣವೇ ಮೂಲಾಧಾರ. ಆದರೆ, ಆಸ್ತಿ ವ್ಯವಹಾರದ ವಿಷಯಕ್ಕೆ ಬಂದರೆ ಇಂದಿಗೂ ಹಣದ ಬದಲು ಆಸ್ತಿಯನ್ನೇ ನೀಡಿ ಮತ್ತೊಂದು ಆಸ್ತಿಯನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂಬುದು ನಿಮಗೆ ಗೊತ್ತೇ?ಆಸ್ತಿ ವರ್ಗಾವಣೆ ಅಧಿನಿಯಮ 1882ರ ಅಡಿಯಲ್ಲಿ ಈ ಕುರಿತು ಸ್ಪಷ್ಟವಾದ ಉಲ್ಲೇಖವಿದೆ. ಆಸ್ತಿ ಮಾರಾಟದ ವಿವಿಧ ಮುಖಗಳು ಮತ್ತು ಎಕ್ಸ್‌ಚೇಂಜ್ ಡೀಡ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಆಸ್ತಿ ವಿನಿಮಯ? (Section 118)

ಸಾಮಾನ್ಯವಾಗಿ ನಾವು ಆಸ್ತಿ ಖರೀದಿಸುವಾಗ ಹಣ ನೀಡಿ ಸೇಲ್ ಡೀಡ್ (Sale Deed) ಮಾಡಿಸಿಕೊಳ್ಳುತ್ತೇವೆ. ಆದರೆ ಆಸ್ತಿ ವರ್ಗಾವಣೆ ಕಾನೂನು 1882ರ ಸೆಕ್ಷನ್ 118ರ ಪ್ರಕಾರ, ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಇನ್ನೊಬ್ಬರಿಗೆ ನೀಡಿ, ಪ್ರತಿಯಾಗಿ ಅವರಿಂದ ಹಣದ ಬದಲಿಗೆ ಮತ್ತೊಂದು ಆಸ್ತಿಯನ್ನು ಪಡೆದರೆ ಅದನ್ನು ವಿನಿಮಯ ಅಥವಾ ಎಕ್ಸ್‌ಚೇಂಜ್ ಎನ್ನಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರ್ಗಾವಣೆಯ ವಿಧ,ವಿವರಣೆ,ಕಾನೂನು ವಿಭಾಗ

ಸೇಲ್ (ಮಾರಾಟ)ನಿಗದಿತ ಹಣಕ್ಕೆ ಆಸ್ತಿಯ ಮಾಲೀಕತ್ವವನ್ನು ವರ್ಗಾಯಿಸುವುದು.ಸೆಕ್ಷನ್ 54

ಅಡಮಾನ (Mortgage)ಸಾಲದ ಭದ್ರತೆಗಾಗಿ ಆಸ್ತಿಯನ್ನು ನೀಡುವುದು. ಸಾಲ ತೀರಿಸದಿದ್ದರೆ ಆಸ್ತಿ ಸಾಲದಾತನ ಪಾಲಾಗುತ್ತದೆ.,ಸೆಕ್ಷನ್ 58

ಲೀಸ್ (ಗುತ್ತಿಗೆ)ಮಾಲೀಕತ್ವ ವರ್ಗಾಯಿಸದೆ, ಕೇವಲ ಬಳಸುವ ಹಕ್ಕನ್ನು ಸೀಮಿತ ಅವಧಿಗೆ ನೀಡುವುದು.ಸೆಕ್ಷನ್ 105 – 117

ಗಿಫ್ಟ್ ಡೀಡ್ (ದಾನ)ಯಾವುದೇ ಹಣ ಪಡೆಯದೆ ಪ್ರೀತಿ ಅಥವಾ ವಿಶ್ವಾಸದಿಂದ ಆಸ್ತಿಯನ್ನು ಉಡುಗೊರೆಯಾಗಿ ನೀಡುವುದು.ಸೆಕ್ಷನ್ 122


ಆಸ್ತಿ ಬದಲಾವಣೆಗೆ ಸ್ಟಾಂಪ್ ಡ್ಯೂಟಿ ?
ಒಂದು ಆಸ್ತಿಗೆ ಬದಲಾಗಿ ಮತ್ತೊಂದು ಆಸ್ತಿಯನ್ನು ವಿನಿಮಯ ಮಾಡಿಕೊಂಡಾಗ ಎಷ್ಟು ಮುದ್ರಾಂಕ ಶುಲ್ಕ (Stamp Duty) ಪಾವತಿಸಬೇಕು ಎಂಬ ಗೊಂದಲ ಅನೇಕರಿಗಿರುತ್ತದೆ.

ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಕಾಯ್ದೆಯ ಆರ್ಟಿಕಲ್ 26ರ ಪ್ರಕಾರ:

ವಿನಿಮಯ ಮಾಡಿಕೊಳ್ಳುವ ಎರಡು ಆಸ್ತಿಗಳಲ್ಲಿ ಯಾವ ಆಸ್ತಿಯ ಸರ್ಕಾರಿ ಮಾರ್ಗಸೂಚಿ ದರ (Guidance Value) ಹೆಚ್ಚಿರುತ್ತದೆಯೋ, ಆ ಆಸ್ತಿಯ ಮೌಲ್ಯವನ್ನು ಪರಿಗಣಿಸಿ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇಲ್ಲಿ ಎರಡು ಆಸ್ತಿಗಳು ಕೈಬದಲಾದರೂ, ಕೇವಲ ಒಂದು ಆಸ್ತಿಗೆ ಮಾತ್ರ ಶುಲ್ಕ ಪಾವತಿಸುವ ಸೌಲಭ್ಯವಿರುವುದು ವಿಶೇಷ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular