HomeLatest Newsಒಟಿಟಿಗೆ ಬಂದ ಸಾಯಿ ಪಲ್ಲವಿ ನಟನೆಯ ಸೋತ ಸಿನಿಮಾ: ಪ್ರೇಕ್ಷಕರಿಗೆ ಕಾದಿದೆ ಎರಡು ದೊಡ್ಡ ಶಾಕ್!

ಒಟಿಟಿಗೆ ಬಂದ ಸಾಯಿ ಪಲ್ಲವಿ ನಟನೆಯ ಸೋತ ಸಿನಿಮಾ: ಪ್ರೇಕ್ಷಕರಿಗೆ ಕಾದಿದೆ ಎರಡು ದೊಡ್ಡ ಶಾಕ್!

ಬಹುನಿರೀಕ್ಷಿತ ರಾಮಾಯಣ ಸೇರಿದಂತೆ ಹಲವು ಪ್ರಮುಖ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಅಭಿನಯದ ಇತ್ತೀಚಿನ ಬಾಲಿವುಡ್ ಚಿತ್ರ ಏಕ್ ದಿನ್ ಈಗ ಒಟಿಟಿ ಅಂಗಳಕ್ಕೆ ಪ್ರವೇಶಿಸಿದೆ. ಥಿಯೇಟರ್ ಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಈ ಪ್ರೇಮಕಥೆಯ ಸಿನಿಮಾ ಡಿಜಿಟಲ್ ಬಿಡುಗಡೆಯಲ್ಲೂ ವಿಭಿನ್ನ ಹಾದಿ ಹಿಡಿದಿದ್ದು, ವೀಕ್ಷಕರಿಗೆ ಎರಡು ದೊಡ್ಡ ಅಚ್ಚರಿಯ ಟ್ವಿಸ್ಟ್ ಗಳನ್ನು ನೀಡಿದೆ.

ಆಮೀರ್ ಖಾನ್ ಪ್ರೊಡಕ್ಷನ್ಸ್ ಸಂಸ್ಥೆ ಮನ್ಸೂರ್ ಖಾನ್ ಅವರ ಸಹಯೋಗದೊಂದಿಗೆ ನಿರ್ಮಿಸಿದ್ದ ಈ ಸಿನಿಮಾ ಸದ್ಯ ಭಾರತೀಯ ಒಟಿಟಿ ವೀಕ್ಷಕರಿಗೆ ವೀಕ್ಷಣೆಗೆ ಲಭ್ಯವಿಲ್ಲ. ಇದು ಮೊದಲ ಆಘಾತವಾದರೆ, ವಿದೇಶಿ ಪ್ರೇಕ್ಷಕರು ಸಹ ಈ ಚಿತ್ರವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಿಲ್ಲ. ವಿದೇಶದಲ್ಲಿ ಈ ಸಿನಿಮಾವನ್ನು ಕೇವಲ ಬಾಡಿಗೆ ಆಧಾರದ ಮೇಲೆ ವೀಕ್ಷಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ವಿದೇಶಿ ವೀಕ್ಷಕರಿಗೆ ಅನುಕೂಲವಾಗುವಂತೆ ಹಿಂದಿ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳ ಡಬ್ಬಿಂಗ್ ಆವೃತ್ತಿಗಳನ್ನೂ ಲಭ್ಯವಾಗಿಸಿರುವುದು ವಿಶೇಷವಾಗಿದೆ.

ಥಾಯ್ಲೆಂಡ್ ದೇಶದ ಜನಪ್ರಿಯ ಸಿನಿಮಾ ಒನ್ ಡೇ ಚಿತ್ರದ ಅಧಿಕೃತ ರಿಮೇಕ್ ಆಗಿರುವ ಈ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ತೆಲುಗಿನಲ್ಲಿ ಒಕ ರೋಜು ಹೆಸರಿನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಅಲ್ಲಿಯೂ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular