HomeKarnataka‘ಸಹ್ಯಾದ್ರಿ ಕೃಷಿ ಸಂತೆ’ಗೆ ಭರ್ಜರಿ ಪ್ರಶಂಸೆ: ರೂ.45 ಲಕ್ಷಕ್ಕೂ ಹೆಚ್ಚು ವಹಿವಾಟು, 50,000ಕ್ಕೂ ಹೆಚ್ಚು ಜನರ...

‘ಸಹ್ಯಾದ್ರಿ ಕೃಷಿ ಸಂತೆ’ಗೆ ಭರ್ಜರಿ ಪ್ರಶಂಸೆ: ರೂ.45 ಲಕ್ಷಕ್ಕೂ ಹೆಚ್ಚು ವಹಿವಾಟು, 50,000ಕ್ಕೂ ಹೆಚ್ಚು ಜನರ ಭೇಟಿ

ಶಿವಮೊಗ್ಗ: ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ (ಐ.ಸಿ.ಎ.ಆರ್.) ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 5 ಮತ್ತು 6ರಂದು ಆಯೋಜಿಸಲಾಗಿದ್ದ ‘ಸಹ್ಯಾದ್ರಿ ಕೃಷಿ ಸಂತೆ’ಗೆ ರೈತರು ಮತ್ತು ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಒಂದೇ ಸೂರಿನಡಿ ಕೃಷಿ ಮಾಹಿತಿ ಹಾಗೂ ಪರಿಕರ:

ರೈತರಿಗೆ ಮತ್ತು ಕೃಷಿ ಆಸಕ್ತರಿಗೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಸಂಪೂರ್ಣ ಮಾಹಿತಿ, ಉತ್ತಮ ಗುಣಮಟ್ಟದ ಬೀಜಗಳು, ಸಸಿಗಳು ಮತ್ತು ಕೃಷಿ ಪರಿಕರಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಈ ಸಂತೆಯು ಅತ್ಯಂತ ಉಪಯುಕ್ತ ವೇದಿಕೆಯಾಗಿ ಮೂಡಿಬಂದಿದೆ. ಗೃಹಿಣಿಯರು ಅಲಂಕಾರಿಕ ಗಿಡಗಳು, ಹೂವಿನ ಸಸಿಗಳು ಹಾಗೂ ಸಣ್ಣ ಪ್ರಮಾಣದ ಉಪಕರಣಗಳನ್ನು ಉತ್ಸಾಹದಿಂದ ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೂ.40-45 ಲಕ್ಷ ವಹಿವಾಟು:

ಸಂತೆಯಲ್ಲಿ ಜರುಗಿದ ಸುಮಾರು 25 ರಿಂದ 30 ನರ್ಸರಿ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಕಸಿ ಗಿಡಗಳು, ಹೂವು ಹಾಗೂ ಔಷಧೀಯ ಸಸ್ಯಗಳು ಸೇರಿದಂತೆ ಸುಮಾರು 50 ರಿಂದ 60 ಸಾವಿರ ಸಸಿಗಳು ಮಾರಾಟವಾಗಿವೆ. ಇದರಿಂದ ಸುಮಾರು ರೂ.40 ರಿಂದ ರೂ.45 ಲಕ್ಷದಷ್ಟು ಭರ್ಜರಿ ವಹಿವಾಟು ನಡೆದಿರುವುದು ನರ್ಸರಿ ಮಾಲೀಕರಲ್ಲಿ ಸಂತಸ ಮೂಡಿಸಿದೆ.

ಸಂತೆಯ ಪ್ರಮುಖ ಆಕರ್ಷಣೆಗಳು:

ಕೃಷಿ ಮತ್ತು ತೋಟಗಾರಿಕೆ ಉಪಕರಣಗಳು, ಜೈವಿಕ ಹಾಗೂ ಸಾವಯವ ಗೊಬ್ಬರಗಳು, ಮೌಲ್ಯವರ್ಧಿತ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ಮಳಿಗೆಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದವು.

ಮಲೆನಾಡಿನ ‘ತೊಡೆದೇವು’ಗೆ ಭಾರಿ ಬೇಡಿಕೆ: ಮಲೆನಾಡಿನ ಸಾಂಪ್ರದಾಯಿಕ ವಿಶೇಷ ಖಾದ್ಯವಾದ ‘ತೊಡೆದೇವು’ ಸಂತೆಯ ಪ್ರಮುಖ ಆಕರ್ಷಣೆಯಾಗಿತ್ತು. ನಂಜುವಳ್ಳಿ ಗ್ರಾಮದ ಗುರುರಾಜ್‌ ಅವರು ತಯಾರಿಸಿದ 4,000ಕ್ಕೂ ಹೆಚ್ಚು ತೊಡೆದೇವು ಖಾದ್ಯಗಳು ಮಾರಾಟವಾಗಿದ್ದು, ಸುಮಾರು ರೂ.70,000 ಆದಾಯ ತಂದುಕೊಟ್ಟಿದೆ.

ಸಂತೆಯ ಭಾಗವಾಗಿ ಸಾರ್ವಜನಿಕರು ಹಾಗೂ ರೈತರು ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕ ತಾಕುಗಳು, ಜೇನು ಪಾರ್ಕ್, ಸಮಗ್ರ ಕೃಷಿ ಪದ್ಧತಿ ಘಟಕ, ಮೀನುಗಾರಿಕೆ, ಕುರಿ ಸಾಗಾಣಿಕೆ ಹಾಗೂ ‘ಕೃಷಿ ಯಾನ’ ಪ್ರವಾಸೋದ್ಯಮ ವಿಭಾಗಗಳಿಗೆ ಭೇಟಿ ನೀಡಿದರು. ಮೊದಲ ದಿನ 28,000ಕ್ಕೂ ಹೆಚ್ಚು ಹಾಗೂ ಎರಡನೇ ದಿನ ಸೇರಿ ಒಟ್ಟಾರೆಯಾಗಿ ಸುಮಾರು 50,000ಕ್ಕೂ ಹೆಚ್ಚು ಸಾರ್ವಜನಿಕರು ಮತ್ತು ರೈತರು ಈ ಕೃಷಿ ಸಂತೆಯ ಪ್ರಯೋಜನ ಪಡೆದುಕೊಂಡಿದ್ದಾರೆ‌ ಈ ಕೃಷಿ ಸಂತೆಯನ್ನು ವಿಶ್ವವಿದ್ಯಾಲಯದ ಕುಲಪತಿ ಡಾ. ಧನಂಜಯ ಎಂ ವಿ. ಇವರು ಉದ್ಘಾಟನೆಯನ್ನು ನೆರವೇರಿಸಿ ನಡೆಸಿ ಈ ಕೃಷಿ ಸಂತೆಯು ರೈತರಿಗೆ ವಿವಿಧ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೆಳೆಗಳ ಬಗ್ಗೆ ಮಾಹಿತಿ, ಬೀಜಗಳ ಲಭ್ಯತೆ ಮತ್ತು ಉತ್ತಮ ಗುಣಮಟ್ಟದ ಸಸಿಗಳನ್ನು ರೈತರಿಗೆ ಒದಗಿಸಿಕೊಡುವ ಒಂದು ಉತ್ತಮ ವೇದಿಕೆಯಾಗಿದೆ ಮತ್ತು ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಬೀಜಗಳು ಸಸಿಗಳು ಮತ್ತು ಪರಿಕರಗಳು ಒಂದೇ ಸೂರಿ ನಡಿ ಪ್ರದರ್ಶನ, ಮಾರಾಟ ಮತ್ತು ತಾಂತ್ರಿಕ ಮಾಹಿತಿಯನ್ನು ರೈತರಿಗೆ ಈ ಕೃಷಿ ಸಂತೆಯು ನೀಡುತ್ತದೆ ಎಂದು ವಿವರಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular