HomeKarnatakaಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಾಧನಾ ಶೆಟ್ಟಿ ಕೇಸ್ ಗೆ ಬಿಗ್ ಟ್ವಿಸ್ಟ್: ಉದ್ಯಮಿ ಎಂದು...

ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಾಧನಾ ಶೆಟ್ಟಿ ಕೇಸ್ ಗೆ ಬಿಗ್ ಟ್ವಿಸ್ಟ್: ಉದ್ಯಮಿ ಎಂದು ಹೇಳಿಕೊಂಡು ಬ್ಲ್ಯಾಕ್ ಮೇಲ್ ಆರೋಪ ಮಾಡಿದ್ದ ಪತಿಯ ಅಸಲಿ ಮುಖ ಬಯಲಿಗೆಳೆದ ಪತ್ನಿ

ಬೆಂಗಳೂರು: ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿ 1.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಉದ್ಯಮಿ ಕಾರ್ತಿಕ್ ಎಂಬಾತ ಆರೋಪ ಮಾಡಿ ದೂರು ನೀಡಿದ್ದ ಪ್ರಕರಣ ಅಚ್ಚರಿ ತಿರುವು ಪಡೆದಿದೆ. ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ ಕಾರ್ತಿಕ್ ನ ನಿಜವಾದ ಮುಖವನ್ನು ಆತನ ಪತ್ನಿ ಹರ್ಷಿತಾ ಬಯಲು ಮಾಡಿದ್ದಾರೆ.

ಪತಿ ಕಾರ್ತಿಕ್ ನ ಲೈಂಗಿಕ ಅಕ್ರಮ ಮತ್ತು ವಂಚನೆಯ ಜಾಲವನ್ನು ಸಾಕ್ಷಿಸಮೇತ ಪತ್ನಿಯೇ ಪೊಲೀಸರಿಗೆ ರವಾನಿಸಿದ್ದು, ಉದ್ಯಮಿ ಕಾರ್ತಿಕ್ ನ ಮುಖವಾಡ ಕಳಚಿ ಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಪತಿ ಕಾರ್ತಿಕ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು, ಸಾಧನಾ ಶೆಟ್ಟಿ ವಿರುದ್ಧ ಆತ ಹೊರಿಸಿರುವ ಆರೋಪಗಳೂ ಸುಳ್ಳು ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ಪತ್ರ ಬರೆಯುವ ಮೂಲಕ ಮಾಹಿತಿ ನೀಡಿದ್ದಾರೆ.

ಹೆಚ್‌ಕೆ ಪರ್ಮನೆಂಟ್ ಮೇಕ್ ಅಪ್ ಕ್ಲಿನಿಕ್’ ಮಾಲೀಕನೆಂದು ಹೇಳಿಕೊಂಡಿರುವ ಕಾರ್ತಿಕ್, ತನಗೆ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ನನ್ನ ಖಾಸಗಿ ಫೋಟೋಗಳನ್ನು ಪತ್ನಿ ಹರ್ಷಿತಾಗೆ ಕಳುಹಿಸಿದ್ದಲ್ಲದೆ ನನ್ನ ಬಳಿ ಕೋಟಿಗಟ್ಟಲೆ ಹಣ ಕೇಳಿದ್ದಾಳೆ ಎಂದು ಆರೋಪಿಸಿದ್ದ. ಆದರೆ ಈ ಪ್ರಕರಣಕ್ಕೆ ಆತನ ಪತ್ನಿಯಿಂದಲೇ ಸ್ಫೋಟಕ ತಿರುವು ಸಿಕ್ಕಿದೆ.

ಪತ್ನಿ ಹರ್ಷಿತಾ ಜಯನಗರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಇದೆಲ್ಲವೂ ತನ್ನ ಪತಿ ಸೃಷ್ಟಿಸಿರುವ ಬ್ಲ್ಯಾಕ್‌ಮೇಲ್ ಕಥೆ. ಸಾಧನಾ ಶೆಟ್ಟಿ ಯಾವತ್ತೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನನ್ನ ಪತಿಯೇ ತನ್ನ ಲೈಂಗಿಕ ಅಕ್ರಮಗಳನ್ನು ಮುಚ್ಚಿಹಾಕಲು ಆಕೆಯನ್ನು ಬ್ಲ್ಯಾಕ್‌ಮೇಲರ್ ಎಂದು ಚಿತ್ರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರ್ತಿಕ್ ಒಬ್ಬ ದೊಡ್ಡ ಉದ್ಯಮಿಯೇನಲ್ಲ, ಆತ ಕೇವಲ ತನ್ನ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಕೆಲಸಗಾರ ಅಷ್ಟೇ ಎಂದು ಕ್ಲಿನಿಕ್​ನ ನಿರ್ದೇಶಕಿಯೂ ಆಗಿರುವ ಹರ್ಷಿತಾ ತಿಳಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಸಾಧನಾ ಶೆಟ್ಟಿಯನ್ನು ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್‌ಗೆ ಕರೆದೊಯ್ದಿದ್ದ ಕಾರ್ತಿಕ್, ಆಕೆಗಾಗಿ ಹೈದರಾಬಾದ್​ನಲ್ಲಿ ಪಿಜಿ ವ್ಯವಸ್ಥೆಯನ್ನೂ ಮಾಡಿದ್ದ. ಆದರೆ ಆತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ 2025ರ ಆಗಸ್ಟ್ 8ರಂದು ಕಾರ್ತಿಕ್ ನಿವಾಸಕ್ಕೆ ಆಗಮಿಸಿದ್ದ ಸಾಧನಾ, ಆತ ನನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆಂದು ಕುಟುಂಬಸ್ಥರ ಮುಂದೆ ಆರೋಪಿಸಿದ್ದಳು. ಈ ವೇಳೆ ನಮ್ಮ ಬಳಿ ಹಣವಿದೆ ಎಂದು ಅವಳು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಕಾರ್ತಿಕ್ ತನ್ನ ಪತ್ನಿಯನ್ನು ನಂಬಿಸಿದ್ದ.

ಸಾಧನಾ ಪೊಲೀಸರಿಗೆ ದೂರು ನೀಡಿದರೆ ಕಷ್ಟ ಎಂದು ಕಾರ್ತಿಕ್, ಆಕೆಯನ್ನೇ ಸಿಲುಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಫೋನ್ ಕಳವು ಮಾಡಿಸಿ, ವಾಪಸ್ ನೀಡಿದ್ದಲ್ಲದೆ ಸಾಧನಾಗೆ ಹಲವು ಬಾರಿ ಬೆದರಿಕೆ ಕರೆಯನ್ನೂ ಮಾಡಿದ್ದ. ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆಂದು ಕಥೆಯನ್ನೂ ಕಟ್ಟಿದ್ದ. ಇಷ್ಟೆಲ್ಲಾ ಆದ ನಂತರ ಪತಿ ಬದಲಾಗಿದ್ದಾನೆಂದು ಹರ್ಷಿತಾ ನಂಬಿದ್ದರು. ಆದರೆ ಸಾಧನಾ ಕಳುಹಿಸಿದ ಸಾಕ್ಷ್ಯಗಳನ್ನು ನೋಡಿದ ಬಳಿಕ ಹರ್ಷಿತಾ ಕೂಡ ಕಂಗಾಲಾಗಿದ್ದರು.

ಕಾರ್ತಿಕ್ ಕೇವಲ ಸಾಧನಾ ಮಾತ್ರವಲ್ಲದೆ ಇನ್ನೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವುದು ಅವರಿಗೆ ಯುವತಿಯಿಂದ ತಿಳಿದುಬಂದಿದೆ. ನಂತರ ಎರಡು ತಿಂಗಳಿಂದ ಪತಿಯಿಂದ ದೂರವಿದ್ದ ಆಕೆ, ಪ್ರಕರಣ ಸಂಬಂಧ ಮಾಹಿತಿ ಕೇಳಿದ ಪೊಲೀಸರ ಮುಂದೆ ಪತಿಯ ಕರಾಳ ಮುಖ ಬಯಲಿಗೆಳೆದಿದ್ದಾರೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಜಯನಗರ ಪೊಲೀಸರು, ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹರ್ಷಿತಾ ರವಾನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular