HomeLatest NewsBIG NEWS: ಆರ್.ಎಸ್.ಎಸ್ ದೇವಸ್ಥಾನ, ದೇವರಿಗಿಂತ ದೊಡ್ದದಾ? ಅವರಿಗೆ ದೇಣಿಗೆ ಕೊಡುತ್ತಿರುವವರು ಯಾರು? ಪ್ರಿಯಾಂಕ್ ಖರ್ಗೆ...

BIG NEWS: ಆರ್.ಎಸ್.ಎಸ್ ದೇವಸ್ಥಾನ, ದೇವರಿಗಿಂತ ದೊಡ್ದದಾ? ಅವರಿಗೆ ದೇಣಿಗೆ ಕೊಡುತ್ತಿರುವವರು ಯಾರು? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬೆಂಗಳೂರು: ಇನ್ನೂ ನೋಂದಣಿ ಮಾಡಿಕೊಳ್ಳದ ಆರ್.ಎಸ್.ಎಸ್ ಸಂಘಕ್ಕೆ ದೇನಿಗೆ ಕೊಡುತ್ತಿರುವವರು ಯಾರೆಂದು ಮಾಹಿತಿ ನೀಡಲಿ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಆರ್.ಎಸ್.ಎಸ್ ನವರಿಗೆ ಎಲ್ಲಿಂದ ದೇಣಿಗೆ ಬರುತ್ತಿದೆ? ಹೊರ ರಾಜ್ಯ, ಹೊರ ದೇಶಗಳಿಂದ ದೇಣಿಗೆ ಬರುತ್ತಿದೆಯಾ ಎಂದು ಮಾಹಿತಿ ಕೊಡಲಿ. ಒಂದು ದೇವಸ್ಥಾನದ ಹುಂಡಿ ಹಣಕ್ಕೂ ಲೆಕ್ಕ ಇರುತ್ತದೆ. ಹುಂಡಿಗೆ ಎಷ್ಟು ಹಣ ಬಿದ್ದಿದೆ ಎಂದು ಎಣಿಸಿ ಲೆಕ್ಕ ಇಡಲಾಗುತ್ತದೆ. ಅದನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಬಳಸಲಾಗುತ್ತದೆ. ಆದರೆ ಆರ್.ಎಸ್.ಎಸ್ ಗೆ ಕೊಡುವ ದೇಣಿಗೆ ಬಗ್ಗೆ ಯಾವುದೇ ಲೆಕ್ಕವಿಲ್ಲ. ಹಾಗಾದರೆ ಆರ್.ಎಸ್.ಎಸ್ ದೇವಸ್ಥಾನ, ದೇವರಿಗಿಂತ ದೊಡ್ಡದಾ? ಎಂದು ಪ್ರಶ್ನಿಸಿದ್ದಾರೆ.

ಮೊದಲು ಆರ್.ಎಸ್.ಎಸ್ ಗೆ ಬರುವ ದೇಣಿಗೆ ಮೂಲಗಳು ಯಾವವು? ಯಾವ ಕಾರಣಕ್ಕೆ ದೇಣಿಗೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಕೊಡಲಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular