HomeIndia500 ರೂ. ಮುಖಬೆಲೆಯ ನೋಟುಗಳ ʻಸಿಂಧುತ್ವʼದ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

500 ರೂ. ಮುಖಬೆಲೆಯ ನೋಟುಗಳ ʻಸಿಂಧುತ್ವʼದ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಸಾಮಾಜಿಕ ಮಾಧ್ಯಮಗಳ ಆಗಮನದೊಂದಿಗೆ, ವಿವಿಧ ರೀತಿಯ ನಕಲಿ ಅಭಿಯಾನಗಳು ಹೆಚ್ಚು ಸದ್ದು ಮಾಡುತ್ತಿರುತ್ತವೆ. ಈ ನಡುವೆ 500 ರೂಪಾಯಿ ನೋಟುಗಳು ಅಮಾನ್ಯವಾಗಿವೆ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಈ ಬಗ್ಗೆ ಸ್ಪಷ್ಟತೆ ನೀಡಿದೆ. ಈ ಅಭಿಯಾನದಲ್ಲಿ ಯಾವುದೇ ಸತ್ಯವಿಲ್ಲ ಎಂದು ತಿಳಿಸಿದ್ದು. ನಕ್ಷತ್ರ (*) ಚಿಹ್ನೆಯನ್ನು ಹೊಂದಿರುವ 500 ರೂ ನೋಟುಗಳು 2016 ರಿಂದ ಚಲಾವಣೆಯಲ್ಲಿವೆ. ಇವು ನಕಲಿ ನೋಟುಗಳಲ್ಲ ಎಂದು ಆರ್ಬಿಐ ದೃಢಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಆರ್ಬಿಐ ಈಗಾಗಲೇ ಸ್ಪಷ್ಟನೆ ನೀಡಿದೆ. ಕರೆನ್ಸಿ ನೋಟು ಸಂಖ್ಯೆ ಫಲಕದಲ್ಲಿ ನಕ್ಷತ್ರ (*) ಚಿಹ್ನೆಯನ್ನು ಮುದ್ರಿಸಿದರೆ, ಅದನ್ನು ಬದಲಿಸಿದ ಅಥವಾ ಮರುಮುದ್ರಿತ ನೋಟಾಗಿ ಗುರುತಿಸಬೇಕು ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular