ಬೆಂಗಳೂರು: ಏರಿಯಾದಲ್ಲಿ ಸಿಕ್ಕಸಿಕ್ಕವರ ಮೇಲೆ ಲಾಂಗ್ ಬೀಸಿ ಬೆದರಿಕೆಯೊಡ್ಡುತ್ತಿದ್ದ ಪುಡಿರೌಡಿ ಸನ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬ್ಯಾಡರಾಯನಪುರ ವ್ಯಾಪ್ತಿಯಲ್ಲಿ ಏರಿಯಾದಲ್ಲಿ ಬಡಾವಣೆಗಳಲ್ಲಿ ಹಾಡಹಗಲೇ ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಲಾಂಗ್ ಬೀಸಿ ಅವಾಜ್ ಹಾಕುತ್ತಿದ್ದ. ನಮ್ಮ ಹುಡ್ಗು ತಂಟೆಗೆ ಬಂದರೆ ಮುಗಿಸಿ ಬಿಡ್ತೀನಿ ಎಂದು ಕೂಗಾಡುತ್ತಿದ್ದ. ರೌಡಿಶೀಟರ್ ಸನ್ನಿ ಲಾಂಗ್ ಹಿಡಿದು ಓಡಾಡುತ್ತಾ ಆವಾಜ್ ಹಾಕುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ರೌಡಿಶೀಟರ್ ಅಟ್ಟಹಾಸಕ್ಕೆ ಸಾರ್ವಜನಿಕರು ಜೀವಭಯದಿಂದ ಒಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಘಟನೆ ಬೆನ್ನಲ್ಲೇ ಬ್ಯಾಡರಾಯನಪುರ ಠಾಣೆ ಪೊಲೀಸರು ರೌಡಿಶೀಟರ್ ಸನ್ನಿಯನ್ನು ಬಂಧಿಸಿದ್ದಾರೆ.