ಬೆಂಗಳೂರು : ಬೆಂಗಳೂರಲ್ಲಿ ರೌಡಿಯೋರ್ವ ಮತ್ತೋರ್ವ ರೌಡಿಯ ಕಿಡ್ನ್ಯಾಪ್ ಮಾಡಿ ಬೆರಳು ಕತ್ತರಿಸಿ ರಾತ್ರಿಯಿಡೀ ಚಿತ್ರಹಿಂಸೆ ನೀಡಿದ ಘಟನೆ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಹಳೇ ವೈಷಮ್ಯಕ್ಕೆ ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಹೌದು. ಬೆಂಗಳೂರು ನಗರ ಜಿಲ್ಲೆ ಅನೇಕಲ್ ತಾಲೂಕಿನ ಹುಸ್ಕೂರು ಬಳಿ ಈ ಘಟನೆ ನಡೆದಿದೆ. ರೌಡಿಶೀಟರ್ ಕಾರ್ತಿಕ್ ಅಲಿಯಾಸ್ ಸಲಗನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಲಾಗಿದೆ. ರೌಡಿಶೀಟರ್ ಗಂಗಾ ಮತ್ತು ಆತನ ಸಹಚರರು ಸಲಗನನ್ನು ಕಿಡ್ನ್ಯಾಪ್ ಮಾಡಿದ್ದಾರೆ .
ಕಾರ್ತಿಕ್ ನನ್ನು ಕಿಡ್ನ್ಯಾಪ್ ಮಾಡಿದ ಗಂಗಾ ಗ್ಯಾಂಗ್ ಆತನ ಮೇಲೆ ಹಲ್ಲೆ ನಡೆಸಿ ಆತನ ಬೆರಳು ಕತ್ತರಿಸಿ ರಾತ್ರಿಯಿಡಿ ಚಿತ್ರಹಿಂಸೆ ನೀಡಿ ನಂತರ ಕಾರ್ತಿಕ್ ನನ್ನು ಎಸೆದು ಹೋಗಿದೆ. ಗಂಭೀರವಾಗಿ ಗಾಯಗೊಂಡ ಕಾರ್ತಿಕ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಳೇ ವೈಷಮ್ಯಕ್ಕೆ ಈ ಕೃತ್ಯ ಎಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

