HomeBeautyತೂಕ ಇಳಿಸುವಲ್ಲೂ ನೆರವಾಗುತ್ತೆ 'ಗುಲಾಬಿʼ

ತೂಕ ಇಳಿಸುವಲ್ಲೂ ನೆರವಾಗುತ್ತೆ ‘ಗುಲಾಬಿʼ

ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ. ಆದ್ರೆ ಬಹುತೇಕರ ತೂಕ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯಾಗೋದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಸುಂದರ ಗುಲಾಬಿ ಹೂ ನಿಮಗೆ ನೆರವಾಗಬಹುದು.

ಯಸ್, ಗುಲಾಬಿ ಹೂವಿನಲ್ಲಿರುವ ಲ್ಯಾಕ್ಸೆಟಿವ್ ಗುಣ ನಿಮ್ಮ ಚಯಾಪಚಯವನ್ನು ಸರಿಪಡಿಸುತ್ತದೆ. ಹಾಗೆ ಹೊಟ್ಟೆಯಲ್ಲಿರುವ ಟಾಕ್ಸಿನ್ ತೆಗೆದುಹಾಕುತ್ತದೆ. ಚಯಾಪಚಯ ವೇಗವಾಗಿ ನಡೆಯುವುದ್ರಿಂದ ಕ್ಯಾಲೋರಿ ವೇಗವಾಗಿ ಕಡಿಮೆಯಾಗುತ್ತದೆ. ಇದು ತೂಕವನ್ನು ನಿಯಂತ್ರಿಸಲು ನೆರವಾಗುತ್ತದೆ.

ಆಯುರ್ವೇದದಲ್ಲಿ ಗುಲಾಬಿ ಎಸಳನ್ನು ಔಷಧಿಗಾಗಿ ಬಳಸ್ತಾರೆ. ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟು ಸುಸ್ತಾಗಿದ್ದರೆ ನೀವು ಗುಲಾಬಿಯನ್ನು ಬಳಸಿನೋಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲು 10-15 ಗುಲಾಬಿ ದಳವನ್ನು ಸ್ವಚ್ಛಗೊಳಿಸಿ. ಒಂದು ಲೋಟ ನೀರಿಗೆ ದಳವನ್ನು ಹಾಕಿ ಕುದಿಸಿ. ನೀರಿನ ಬಣ್ಣ ಕಂದು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದ ನಂತ್ರ ನೀರಿಗೆ ಚಿಟಕಿ ಏಲಕ್ಕಿ ಪುಡಿ ಹಾಗೂ ಜೇನುತುಪ್ಪವನ್ನು ಹಾಕಿ. ದಿನದಲ್ಲಿ ಎರಡು ಬಾರಿ ಟೀ ರೂಪದಲ್ಲಿ ಇದನ್ನು ಸೇವನೆ ಮಾಡಿ. ಇದು ಕೇವಲ ತೂಕ ಕಡಿಮೆ ಮಾಡುವುದೊಂದೇ ಅಲ್ಲ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular