HomeBeautyಗುಲಾಬಿ ಹೂ ಹೇರ್ ಪ್ಯಾಕ್ ನಿವಾರಣೆ ಮಾಡುತ್ತೆ ಕೂದಲಿನ ಎಲ್ಲಾ ಸಮಸ್ಯೆ

ಗುಲಾಬಿ ಹೂ ಹೇರ್ ಪ್ಯಾಕ್ ನಿವಾರಣೆ ಮಾಡುತ್ತೆ ಕೂದಲಿನ ಎಲ್ಲಾ ಸಮಸ್ಯೆ

ಗುಲಾಬಿ ದಳಗಳು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಮಾತ್ರವಲ್ಲ ಇದರಿಂದ ಕೂದಲಿನ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಇದರಿಂದ ಕೂದಲಿನ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

1ಕಪ್ ತೆಂಗಿನೆಣ್ಣೆಯಲ್ಲಿ ಸ್ವಲ್ಪ ಗುಲಾಬಿ ದಳಗಳನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ ತೈಲವನ್ನು ತಣ್ಣಗಾಗಲು ಬಿಡಿ. ಬಳಿಕ ಗುಲಾಬಿ ದಳಗಳನ್ನು ಬಿಸಿಲಿನಲ್ಲಿ ಒಣಗಿಸಿ ಅವು ಕಂದು ಬಣ್ಣಕ್ಕೆ ಬಂದಾಗ ಅವುಗಳನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಅದಕ್ಕೆ ತಯಾರಿಸಿದ ಎಣ್ಣೆ ಮತ್ತು 2 ಚಮಚ ಜೇನುತುಪ್ಪ ಮಿಕ್ಸ್ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಇದನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಕವರ್ ಮಾಡಿ. 1 ಗಂಟೆಗಳ ಕಾಲ ಬಿಟ್ಟು ಬಳಿಕ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ. ಕೂದಲಿಗೆ ಕಂಡೀಷನರ್ ಬಳಸಿ. ಇದನ್ನು ವಾರಕ್ಕೊಮ್ಮೆ ಮಾಡಿ. ಇದರಿಂದ ಕೂದಲ ಬೆಳವಣಿಗೆ ಉತ್ತಮವಾಗಿರುತ್ತದೆ. ಕೂದಲು ಹೊಳೆಯುತ್ತದೆ. ಮತ್ತು ಕೂದಲಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular