HomeKarnatakaಸ್ವಪಕ್ಷದ ಸಂಸದನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೂಪಾಲಿ ನಾಯ್ಕ್: ಚುನಾವಣೆಯಲ್ಲಿ ನಾನು ಸೋಲಲು ಅನಂತ್ ಕುಮಾರ್...

ಸ್ವಪಕ್ಷದ ಸಂಸದನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೂಪಾಲಿ ನಾಯ್ಕ್: ಚುನಾವಣೆಯಲ್ಲಿ ನಾನು ಸೋಲಲು ಅನಂತ್ ಕುಮಾರ್ ಹೆಗಡೆಯೇ ಕಾರಣ ಎಂದ ಬಿಜೆಪಿ ಮಾಜಿ ಶಾಸಕಿ

ಉತ್ತರ ಕನ್ನಡ: ಮಾಜಿ ಶಾಸಕಿ ರೂಪಾಲಿ ನಾಯ್ಕ್, ಸ್ವಪಕ್ಷದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಅನಂತ್ ಕುಮಾರ್ ಹೆಗಡೆಯೇ ಕಾರಣ ಎಂದು ಆರೋಪಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆ ಒಂದೇ ಒಂದು ದಿನ ಪ್ರಚಾರಕ್ಕೆ ಬಂದಿದ್ದರೆ ಕಾರವಾರದಲ್ಲಿ ನಾವು ಗೆಲ್ಲುತ್ತಿದ್ದೆವು . ಈ ಮಾತನ್ನು ನಾನು ಹೇಳುತ್ತಿಲ್ಲ. ಕಾರವಾರದ ಜನ ಹೇಳುತ್ತಿದ್ದಾರೆ ಎಂದರು.

ಕಾರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಡಿದ ರೂಪಾಲಿ ನಾಯ್ಕ್, ಅನಂತ್ ಕುಮಾರ್ ಹೆಗಡೆ ಬಳಿ ಅವರದ್ದೇ ಆದ ಕಾರ್ಯಕರ್ತರ ಪಡೆ ಇದೆ. ಈಗಲಾದರೂ ಪಕ್ಷದ ಕಚೇರಿಯಲ್ಲಿ ಸಭೀ ಕರೆದಿದ್ದಕ್ಕೆ ಅಭಿನಂದಿಸುತ್ತೇನೆ. ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು. ನಾವೆಲ್ಲರೂ ಸೇರಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ನಾನು ಯಾವತ್ತೂ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸುವ ಯತ್ನ ಮಾಡಿಲ್ಲ. ಅನಂತ್ ಕುಮಾರ್ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಂದಿದ್ದಕ್ಕೆ ಖುಷಿ ಇದೆ ಎಂದರು.

 

For Latest News Updates, Join Our Whatsapp Community🚩
RELATED ARTICLES

Most Popular