HomeLatest Newsಹಿಟ್‌ಮ್ಯಾನ್ ಈಸ್ ಬ್ಯಾಕ್! ಕೊಹ್ಲಿ ರೆಕಾರ್ಡ್ ಮುರಿದು ವಾಂಖೆಡೆಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ

ಹಿಟ್‌ಮ್ಯಾನ್ ಈಸ್ ಬ್ಯಾಕ್! ಕೊಹ್ಲಿ ರೆಕಾರ್ಡ್ ಮುರಿದು ವಾಂಖೆಡೆಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಹೈ-ವೋಲ್ಟೇಜ್ ಪಂದ್ಯದಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಸ್ಫೋಟಕ ಅರ್ಧಶತಕ ಸಿಡಿಸಿದ ರೋಹಿತ್, ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ತಮ್ಮ ಬ್ಯಾಟಿಂಗ್ ಶಕ್ತಿ ಕುಂದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಅಮೋಘ ಇನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ಐಪಿಎಲ್‌ನ ವಿಶೇಷ ದಾಖಲೆಯೊಂದನ್ನು ರೋಹಿತ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಕೆಕೆಆರ್ ನೀಡಿದ್ದ 221 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಭರ್ಜರಿ ಆರಂಭ ನೀಡಿದರು. ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ಇದು ತಮ್ಮ ಐಪಿಎಲ್ ವೃತ್ತಿಜೀವನದ ಅತಿ ವೇಗದ ಫಿಫ್ಟಿ ಎಂದು ದಾಖಲಿಸಿದರು. ಈ ಹಿಂದೆ 2015ರ ಫೈನಲ್‌ನಲ್ಲಿ ಸಿಎಸ್‌ಕೆ ವಿರುದ್ಧ 25 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಅವರ ವೈಯಕ್ತಿಕ ದಾಖಲೆಯಾಗಿತ್ತು.


ವಿರಾಟ್ ಕೊಹ್ಲಿ ದಾಖಲೆ ಉಡೀಸ್

ಈ ಪಂದ್ಯದಲ್ಲಿ 38 ಎಸೆತಗಳಲ್ಲಿ 78 ರನ್ (6 ಬೌಂಡರಿ, 6 ಸಿಕ್ಸರ್) ಬಾರಿಸಿದ ರೋಹಿತ್, ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್: ಕೆಕೆಆರ್ ವಿರುದ್ಧ ರೋಹಿತ್ ಶರ್ಮಾ ಈಗ ಒಟ್ಟು 1161 ರನ್ ಗಳಿಸಿದ್ದಾರೆ.
  • ಈ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ 1159 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.
  • ಐಪಿಎಲ್‌ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು 50 ಬಾರಿ ಗಳಿಸಿದ 3ನೇ ಭಾರತೀಯ (ಕೊಹ್ಲಿ ಮತ್ತು ಧವನ್ ನಂತರ) ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಆಕರ್ಷಕ ಬ್ಯಾಟಿಂಗ್ ವೈಖರಿ

ವೈಭವ್ ಅರೋರಾ ಎಸೆದ ಫುಲ್ ಟಾಸ್ ಚೆಂಡನ್ನು ಎಕ್ಸ್ಟ್ರಾ ಕವರ್ ಮೇಲೆ ಸಿಕ್ಸರ್ ಸಿಡಿಸಿದ ರೀತಿ ರೋಹಿತ್ ಅವರ ‘ವಿಂಟೇಜ್’ ಶೈಲಿಯನ್ನು ನೆನಪಿಸಿತು. ವರುಣ್ ಚಕ್ರವರ್ತಿ ಮತ್ತು ಕಾರ್ತಿಕ್ ತ್ಯಾಗಿ ಅವರ ಓವರ್‌ಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪವರ್‌ಪ್ಲೇನಲ್ಲೇ ಮುಂಬೈಗೆ ಬಲ ತುಂಬಿದರು. ಅಂತಿಮವಾಗಿ ವೈಭವ್ ಅರೋರಾ ಎಸೆತದಲ್ಲೇ ಕ್ಯಾಚ್ ನೀಡಿ ಔಟಾಗುವ ಮೊದಲು ರೋಹಿತ್ ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular