HomeLatest Newsಆಯ್ಕೆಗಾರರ ಸಂದೇಶದಿಂದ ಕೊಪಗೊಂಡರೂ ನಿವೃತ್ತಿಗೆ ಒಪ್ಪಿದ್ದರೇ ರೋಹಿತ್ ಶರ್ಮಾ? ಲಾರ್ಡ್ಸ್ ಶತಕದ ಬಳಿಕ ಕತೆ ಬದಲಾಯ್ತಾ?

ಆಯ್ಕೆಗಾರರ ಸಂದೇಶದಿಂದ ಕೊಪಗೊಂಡರೂ ನಿವೃತ್ತಿಗೆ ಒಪ್ಪಿದ್ದರೇ ರೋಹಿತ್ ಶರ್ಮಾ? ಲಾರ್ಡ್ಸ್ ಶತಕದ ಬಳಿಕ ಕತೆ ಬದಲಾಯ್ತಾ?

2027ರ ಏಕದಿನ ವಿಶ್ವಕಪ್‌ಗೆ ಭಾರತೀಯ ತಂಡದ ಸಜ್ಜಾಗುವಿಕೆ ಆರಂಭವಾಗುತ್ತಿರುವ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಭವಿಷ್ಯದ ಕುರಿತು ಬಿಸಿಸಿಐ ಸಭೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಪೈಕಿ ರೋಹಿತ್ ಶರ್ಮಾ ಅವರ ನಿವೃತ್ತಿಗೆ ಸಂಬಂಧಿಸಿದಂತೆ ಪಿಟಿಐ ವರದಿಯೊಂದು ಸೌಂಡ್ ಮಾಡುತ್ತಿದ್ದು, ಆಯ್ಕೆ ಸಮಿತಿಯ ಸದಸ್ಯರೊಬ್ಬರು ರೋಹಿತ್‌ಗೆ ‘ಮುಂದಿನ ಹಂತದ ಬಗ್ಗೆ ಯೋಚಿಸಲು’ ಸೂಚಿಸಿದ್ದರು ಎಂದು ಹೇಳಲಾಗಿದೆ. ಈ ನಿರ್ಧಾರದಿಂದ ರೋಹಿತ್ ಕೋಪಗೊಂಡಿದ್ದರೂ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ನಿವೃತ್ತಿಯಾಗಲು ಒಪ್ಪಿಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಲಾರ್ಡ್ಸ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಗಳಿಸಿದ ಭರ್ಜರಿ 138 ರನ್‌ಗಳ ಶತಕವು ಸದ್ಯಕ್ಕೆ ಅವರ ನಿವೃತ್ತಿಯ ವಿಕಲ್ಪವನ್ನು ತಡೆದುಹಾಕಿದೆ.

ಇನ್ನೊಂದೆಡೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೊಂಟಿ ರೋಡ್ಸ್, 2027ರ ಏಕದಿನ ವಿಶ್ವಕಪ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಉಪಸ್ಥಿತಿ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೋಡ್ಸ್, ವಿಶ್ವಕಪ್‌ನಂತಹ ತೀವ್ರ ಒತ್ತಡದ ಟೂರ್ನಿಗಳಲ್ಲಿ ಆಟಗಾರರ ಪ್ರತಿಭೆ ಮತ್ತು ಫಾರ್ಮ್ ಮಾತ್ರವಲ್ಲದೆ, ಅವರ ಅನುಭವ ಮತ್ತು ಮಾನಸಿಕ ಶಕ್ತಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ. ನಾಲ್ಕು ವಿಶ್ವಕಪ್‌ಗಳಲ್ಲಿ ಆಡಿದ ಅನುಭವವಿರುವ ರೋಡ್ಸ್, ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರ ತಂಡದಲ್ಲಿದ್ದರೆ ಅದು ಭಾರತಕ್ಕೆ ದೊಡ್ಡ ಆಸ್ತಿಯಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular