HomeLatest Newsಬೆಂಗಳೂರು ಜೋಡಿ ಕೊಲೆ ಕೇಸ್: ಟೆಕ್ಕಿ ರೋಹನ್ ಮಾನಸಿಕ ಅಸ್ವಸ್ಥನಲ್ಲ ಸಿಮ್ ಪೋರ್ಟ್ ಮಾಡಲು ಬಿಡದ್ದಕ್ಕೆ...

ಬೆಂಗಳೂರು ಜೋಡಿ ಕೊಲೆ ಕೇಸ್: ಟೆಕ್ಕಿ ರೋಹನ್ ಮಾನಸಿಕ ಅಸ್ವಸ್ಥನಲ್ಲ ಸಿಮ್ ಪೋರ್ಟ್ ಮಾಡಲು ಬಿಡದ್ದಕ್ಕೆ ಹೆತ್ತವರನ್ನೇ ಕೊಂದ ಪಾಪಿ

ಬೆಂಗಳೂರು : ರಾಜ್ಯ ರಾಜಧಾನಿಯನ್ನೇ ಬೆಚ್ಚಿಬೀಳಿಸಿದ್ದ ತಂದೆ-ತಾಯಿಯ ಜೋಡಿ ಕೊಲೆ ಕೇಸ್​​ಗೆ (Double Murder Case) ಇದೀಗ ತನಿಖೆ ವೇಳೆ ಬಿಗ್ ಟ್ವಿಸ್ಟ್ ಸಿಕ್ಕಿದೆ ಹೆಚ್‌ಎಎಲ್ ಟೌನ್‌ಶಿಪ್ ಬಳಿಯ ವಿಜ್ಞಾನ್ ನಗರದ ಆದರ್ಶ್ ವಿಸ್ಟಾ ಅಪಾರ್ಟ್‌ಮೆಂಟ್‌ನ ವಿಲ್ಲಾ ಸಂಖ್ಯೆ 112ರಲ್ಲಿ ನಡೆದಿದ್ದ ನಿವೃತ್ತ ನೌಕಾಪಡೆಯ ಕ್ಯಾಪ್ಟನ್ ನವೀನ್ ಚಂದ್ರ ಭಟ್ (60) ಮತ್ತು ದಂತ ವೈದ್ಯೆ ಡಾ. ಶ್ಯಾಮಲಾ ಭಟ್ (55) ಅವರ ಬರ್ಬರ ಹತ್ಯೆಯ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಕೊಲೆಗಡುಕ ಮಗ, 33 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ರೋಹನ್ ಚಂದ್ರ ಪೊಲೀಸರ ಮುಂದೆ ಒಪ್ಪಿಕೊಂಡಿರುವ ಸತ್ಯ ಕೇಳಿದರೆ ನೀವೂ ಶಾಕ್ ಆಗ್ತೀರಾ

ಸ್ಕಿಜೋಫ್ರೇನಿಯಾ ನಾಟಕ ಆಡಿದ್ನಾ ಪಾಪಿ ಪುತ್ರ?: ನಿಮ್ಹಾನ್ಸ್ ವರದಿಯಿಂದ ಬಯಲಾದ ಸತ್ಯ

ಘಟನೆ ನಡೆದ ಆರಂಭದಲ್ಲಿ, ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಒಂದು ಮಾಹಿತಿ ನೀಡಿದ್ದರು. ರೋಹನ್ ತೀವ್ರ ಮಾನಸಿಕ ಒತ್ತಡ ಹಾಗೂ ‘ಸ್ಕಿಜೋಫ್ರೇನಿಯಾ’ (Schizophrenia) ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಆತನ ತಾಯಿ ಶ್ಯಾಮಲಾ ಭಟ್ ಈ ಹಿಂದೆ ಹೇಳಿಕೊಂಡಿದ್ದರು.

ಇದರ ಆಧಾರದ ಮೇಲೆ ವೈಟ್‌ಫೀಲ್ಡ್ ಉಪ ಪೊಲೀಸ್ ಆಯುಕ್ತ ಸೈದುಲು ಅಡಾವತ್ ಅವರ ನೇತೃತ್ವದ ತಂಡ ಆರೋಪಿಯನ್ನು ಹೆಚ್ಚಿನ ಪರೀಕ್ಷೆಗಾಗಿ ನಿಮ್ಹಾನ್ಸ್ (NIMHANS) ಆಸ್ಪತ್ರೆಗೆ ದಾಖಲಿಸಿತ್ತು. ಆದರೆ, ಒಂದು ವಾರದ ತೀವ್ರ ವೀಕ್ಷಣೆ ಮತ್ತು ವೈದ್ಯಕೀಯ ತಪಾಸಣೆಯ ಬಳಿಕ ನಿಮ್ಹಾನ್ಸ್ ವೈದ್ಯರು ನೀಡಿದ ವರದಿ ಪೊಲೀಸರ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತು. ರೋಹನ್ ಯಾವುದೇ ಮಾನಸಿಕ ಕಾಯಿಲೆಯಿಂದ ಬಳಲುತ್ತಿಲ್ಲ, ಆತ ಸಂಪೂರ್ಣ ಮಾನಸಿಕವಾಗಿ ಫಿಟ್ (Mentally Fit) ಇದ್ದಾನೆ ಎಂದು ವೈದ್ಯರು ಪ್ರಮಾಣೀಕರಿಸಿದರು. ಆ ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ತನಿಖೆ ಆರಂಭಿಸಿದಾಗ ಕೊಲೆಯ ಹಿಂದಿನ ಆ 2 ಅಸಲಿ ಕಾರಣಗಳು ಹೊರಬಂದವು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆತ್ತವರನ್ನೇ ಇರಿದು ಕಲ್ಲಾಗಲು ಕಾರಣವಾದ ಆ 2 ವಿಚಿತ್ರ ಸಂಗತಿಗಳು:

ಸ್ಟಾರ್ಟ್‌ಅಪ್ ಆರಂಭಿಸಲು 10 ಲಕ್ಷ ರೂ. ನೀಡದ ಪೋಷಕರು:

ಅಮೆರಿಕಾದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದ ರೋಹನ್, ಕೆಲ ತಿಂಗಳ ಹಿಂದಷ್ಟೇ ತನ್ನ ಸಾಫ್ಟ್‌ವೇರ್ ಕೆಲಸವನ್ನು ಬಿಟ್ಟಿದ್ದ. ಸ್ವಂತವಾಗಿ AI ಟೂಲ್ಸ್ ಪೂರೈಸುವ ಸ್ಟಾರ್ಟ್‌ಅಪ್ ಕಂಪನಿ ಆರಂಭಿಸಲು ಪೋಷಕರಲ್ಲಿ 10 ಲಕ್ಷ ರೂಪಾಯಿ ಆರ್ಥಿಕ ಸಹಾಯ ಕೇಳಿದ್ದ. ಆದರೆ, ಮೊದಲು ಬೇರೆಲ್ಲೂ ಆದರೂ ಕೆಲಸ ಹುಡುಕು, ಆಮೇಲೆ ನೋಡೋಣ ಎಂದು ಪೋಷಕರು ಹೂಡಿಕೆಗೆ ಹಣ ನೀಡಲು ನಿರಾಕರಿಸಿದ್ದರು. ಇದು ಮಗನ ಕೋಪಕ್ಕೆ ಮೊದಲ ಕಾರಣವಾಗಿತ್ತು.

ಜಿಯೋದಿಂದ ಏರ್‌ಟೆಲ್‌ಗೆ ಸಿಮ್ ಪೋರ್ಟ್ ಮಾಡಲು ಬಿಡದ ತಂದೆ

ಎರಡನೇ ಕಾರಣ ತೀರಾ ವಿಚಿತ್ರ ಹಾಗೂ ಆಘಾತಕಾರಿಯಾಗಿದೆ. ರೋಹನ್ ತಾನು ಬಹಳ ದಿನಗಳಿಂದ ಬಳಸುತ್ತಿದ್ದ, ಎಲ್ಲರಿಗೂ ಹಂಚಿಕೊಂಡಿದ್ದ ತನ್ನ ಜಿಯೋ (Jio) ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಹಾಗೆಯೇ ಏರ್‌ಟೆಲ್‌ಗೆ (Airtel) ಪೋರ್ಟ್ ಮಾಡಲು ಬಯಸಿದ್ದ. ಆದರೆ ತಂದೆ ನವೀನ್ ಚಂದ್ರ ಭಟ್ ಇದಕ್ಕೆ ತೀವ್ರವಾಗಿ ನಿರಾಕರಿಸಿದ್ದರು. ಈಗಾಗಲೇ ಕೆಲಸ ಬಿಟ್ಟು ಹಣವೂ ಸಿಗದೆ ಸಿಡಿಕಿಡಿಯಾಗಿದ್ದ ರೋಹನ್ ಭಟ್, ಫೆಬ್ರವರಿ 11 ರಂದು ಇದೇ ಸಿಮ್ ಪೋರ್ಟಿಂಗ್ ವಿಚಾರವಾಗಿ ತಂದೆಯೊಂದಿಗೆ ಭೀಕರ ಜಗಳವಾಡಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ಕೋಪದ ಉತ್ತುಂಗದಲ್ಲಿ ಹೆತ್ತವರ ಮೇಲೆಯೇ ಚಾಕುವಿನಿಂದ ಮನಸೋಇಚ್ಛೆ ಇರಿದು ಸಾಯಿಸಿದ್ದಾನೆ

ಭದ್ರವಾಗಿದೆ ಸಾಕ್ಷ್ಯ: 500 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ ಖಾಕಿ ಪಡೆ

ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪೊಲೀಸರು, ಕೊಲೆಗಡುಕ ರೋಹನ್ ಚಂದ್ರನ ವಿರುದ್ಧ ಕೋರ್ಟ್‌ಗೆ ಸಲ್ಲಿಸಲು ಸುಮಾರು 500 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ.

ಸಾಕ್ಷಿಗಳ ಹೇಳಿಕೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 40 ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ವಿಧಿವಿಜ್ಞಾನ ವರದಿ (FSL Report): ಘಟನೆಯ ದಿನ ಆರೋಪಿ ರೋಹನ್ ದೇಹ ಮತ್ತು ಬಟ್ಟೆಯ ಮೇಲಿದ್ದ ರಕ್ತದ ಕಲೆಗಳು ಆತನ ತಂದೆ-ತಾಯಿಯದ್ದೇ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿಸ್ಸಂದೇಹವಾಗಿ ದೃಢಪಡಿಸಿದೆ.

ಕೆಲಸ ಬಿಟ್ಟಿದ್ದ ಮಗನಿಗೆ ಬುದ್ಧಿವಾದ ಹೇಳಿ, ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಿ ಎಂದಿದ್ದ ನಿವೃತ್ತ ನೌಕಾಪಡೆಯ ಅಧಿಕಾರಿ ಹಾಗೂ ದಂತ ವೈದ್ಯೆ, ಕಡೆಗೆ ತಾವು ಹೆತ್ತ ಮಗನ ಕ್ರೌರ್ಯಕ್ಕೇ ಬಲಿಯಾಗಿದ್ದು ಇಡೀ ಬೆಂಗಳೂರು ಮಹಾನಗರವನ್ನೇ ಕಣ್ಣೀರಲ್ಲಿ ಮುಳುಗಿಸಿದೆ. ಸದ್ಯ ಆರೋಪಿ ಕಂಬಿ ಎಣಿಸುತ್ತಿದ್ದಾನೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular