HomeKarnatakaBREAKING NEWS: ರಾಕ್ ಲೈನ್ ಮಾಲ್ ಬೀಗಮುದ್ರೆ ತೆರವುಗೊಳಿಸಲು BBMPಗೆ ಹೈಕೋರ್ಟ್ ಸೂಚನೆ

BREAKING NEWS: ರಾಕ್ ಲೈನ್ ಮಾಲ್ ಬೀಗಮುದ್ರೆ ತೆರವುಗೊಳಿಸಲು BBMPಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಲೀಕತ್ವದ ರಾಕ್ ಲೈನ್ ಮಾಲ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಕ್ ಲೈನ್ ಮಾಲ್ ಬೀಗಮುದ್ರೆ ತೆರವು ಮಾಡುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.

ತೆರಿಗೆ ಹಣ ಪಾವತಿಸದೇ ಬಾಕಿ ಇ ಟ್ಟುಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಕಂದಾಯ ಅಧಿಕಾರಿಗಳು ರಾಕ್ ಲೈನ್ ಮಾಲ್ ಗೆ ಬೀಗ ಮುದ್ರೆ ಹಾಕಿದ್ದರು. ಬಿಬಿಎಂಪಿ ಕ್ರಮ ಪ್ರಶ್ನಿಸಿ ರಾಕ್ ಲೈನ್ ವೆಂಕಟೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಯಾವುದೇ ಮಾಹಿತಿ ನೀಡದೇ ಏಕಾಏಕಿ ಮಾಲ್ ಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ರಾಕ್ ಲೈನ್ ವೆಂಕಟೇಶ್ ಪರ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ಹೈಕೋರ್ಟ್ ರಾಕ್ ಲೈನ್ ಮಾಲ್ ಬೀಗಮುದ್ರೆ ತೆರವಿಗೆ ಸೂಚಿಸಿದ್ದು, ಆದೇಶ ಪ್ರಶ್ನಿಸಲು ಬಿಬಿಎಂಪಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

For Latest News Updates, Join Our Whatsapp Community🚩
RELATED ARTICLES

Most Popular