HomeEntertainment'ಒಂದು ಸರಳ ಪ್ರೇಮಕಥೆ' ಚಿತ್ರದ ''ಕೃಷ್ಣ ಎನಬಾರದೆ'' ಹಾಡು ರಿಲೀಸ್

‘ಒಂದು ಸರಳ ಪ್ರೇಮಕಥೆ’ ಚಿತ್ರದ ”ಕೃಷ್ಣ ಎನಬಾರದೆ” ಹಾಡು ರಿಲೀಸ್

ಸಿಂಪಲ್ ಸುನಿ ನಿರ್ದೇಶನದ ವಿನಯ್ ರಾಜಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ‘ಕೃಷ್ಣ ಎನಬಾರದೆ’ ಎಂಬ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಶಿವಾನಿ ಸ್ವಾಮಿ ಧ್ವನಿಯಲ್ಲಿ ತುಂಬಾ ಸೊಗಸಾಗಿ ಮೂಡಿ ಬಂದಿರುವ ಈ ಹಾಡು ಕೆಲವೇ ನಿಮಿಷಗಳಲ್ಲಿ ಭರ್ಜರಿ ವೀಕ್ಷಣೆ ಕಂಡಿದೆ. ವೀರ್ ಸಮರ್ಥ್ ಸಂಗೀತ ಮತ್ತು ಶ್ರೀ ಪುರಂದರ ದಾಸರ ಸಾಹಿತ್ಯವಿದೆ.

ಲವ್ ಸ್ಟೋರಿ ಸ್ಟೋರಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಒಂದು ಸರಳ ಪ್ರೇಮ ಕಥೆ’ ಚಿತ್ರವನ್ನು ರಾಮ್ ಮೂವೀಸ್ ಬ್ಯಾನರ್ ನಲ್ಲಿ ಮೈಸೂರು ರಮೇಶ್  ನಿರ್ಮಾಣ ಮಾಡಿದ್ದು, ವಿನಯ್ ರಾಜಕುಮಾರ್, ಮಲ್ಲಿಕಾಸಿಂಗ್ ಮತ್ತು ಸ್ವಾತಿಷ್ಟ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆದಿ ಸಂಕಲನ, ಕಾರ್ತಿಕ್ ಶರ್ಮಾ ಮತ್ತು ಸಭಾ ಕುಮಾರ್  ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular