HomeLatest Newsಏರ್‌ಪೋರ್ಟ್ ಇಲ್ಲ, ಸ್ವಂತ ಕರೆನ್ಸಿಯೂ ಇಲ್ಲಆದ್ರೂ ಇಲ್ಲಿನ ಪ್ರತಿ ಪ್ರಜೆಯೂ ಕೋಟ್ಯಧಿಪತಿ ಯಾವುದು ಈ ಕುಬೇರ...

ಏರ್‌ಪೋರ್ಟ್ ಇಲ್ಲ, ಸ್ವಂತ ಕರೆನ್ಸಿಯೂ ಇಲ್ಲಆದ್ರೂ ಇಲ್ಲಿನ ಪ್ರತಿ ಪ್ರಜೆಯೂ ಕೋಟ್ಯಧಿಪತಿ ಯಾವುದು ಈ ಕುಬೇರ ದೇಶ

ಒಂದು ದೇಶ ಅಂದಮೇಲೆ ಅಲ್ಲಿ ದೊಡ್ಡ ಏರ್‌ಪೋರ್ಟ್ ಇರಬೇಕು, ಸ್ವಂತ ಕರೆನ್ಸಿ ಇರಬೇಕು ಅಂತ ನಾವೆಲ್ಲ ಅಂದುಕೊಂಡಿರುತ್ತೇವೆ. ಆದರೆ, ಜಗತ್ತಿನ ಈ ಪುಟ್ಟ ರಾಷ್ಟ್ರದಲ್ಲಿ ಇವಾವುವೂ ಇಲ್ಲದಿದ್ದರೂ ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಕೋಟ್ಯಧಿಪತಿ ಅದುವೇ ಯುರೋಪಿನ ಸುಂದರ ರಾಷ್ಟ್ರ ಲಿಚ್ಟೆನ್‌ಸ್ಟೈನ್ (Liechtenstein).
ಕೇವಲ 160 ಚದರ ಕಿಲೋಮೀಟರ್ ವಿಸ್ತೀರ್ಣದ ಈ ಪುಟ್ಟ ದೇಶದ ಬಗ್ಗೆ ನೀವು ಬೆರಗಾಗುವ ಸಂಗತಿಗಳು ಇಲ್ಲಿವೆ:

ಪ್ರತಿ ಪ್ರಜೆಯೂ ಕೋಟ್ಯಧಿಪತಿ

ಲಿಚ್ಟೆನ್‌ಸ್ಟೈನ್‌ನ ತಲಾವಾರು ಆದಾಯ (GDP per capita) ಬರೋಬ್ಬರಿ $2,31,713. ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಇಲ್ಲಿನ ಜನರು ಎಷ್ಟು ಶ್ರೀಮಂತರೆಂದರೆ, ಬಹುತೇಕರು ಜೀವನಪೂರ್ತಿ ಕೆಲಸ ಮಾಡುವ ಅಗತ್ಯವೇ ಇಲ್ಲ ತಮ್ಮ ಇಷ್ಟದ ಹವ್ಯಾಸಗಳನ್ನು ಪೂರೈಸುತ್ತಾ ರಾಜಾತಿರಾಜರಂತೆ ಬದುಕುತ್ತಾರೆ.

ಸ್ವಂತದ್ದೇನೂ ಇಲ್ಲ ಆದರೂ ನಂಬರ್ 1

ಈ ದೇಶಕ್ಕೆ ತನ್ನದೇ ಆದ ಕೆಲವು ಮೂಲಭೂತ ಸೌಲಭ್ಯಗಳಿಲ್ಲ ಎಂಬುದು ಅಚ್ಚರಿಯ ವಿಷಯ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏರ್‌ಪೋರ್ಟ್ ಇಲ್ಲ: ಇಲ್ಲಿಗೆ ಬರಬೇಕೆಂದರೆ ನೆರೆಯ ಸ್ವಿಟ್ಜರ್ಲೆಂಡ್ ವಿಮಾನ ನಿಲ್ದಾಣವನ್ನೇ ಅವಲಂಬಿಸಬೇಕು.

ಸ್ವಂತ ಕರೆನ್ಸಿ ಇಲ್ಲ: ಸ್ವಿಟ್ಜರ್ಲೆಂಡ್‌ನ ಸ್ವಿಸ್ ಫ್ರಾಂಕ್ ಅನ್ನು ಇಲ್ಲಿ ಬಳಸಲಾಗುತ್ತದೆ.

ಸ್ವಂತ ಭಾಷೆ ಇಲ್ಲ: ಜರ್ಮನ್ ಇಲ್ಲಿನ ಅಧಿಕೃತ ಭಾಷೆ.

ಸೈನ್ಯವೂ ಇಲ್ಲ: ಇಡೀ ದೇಶದ ರಕ್ಷಣೆಗೆ ಇರುವುದು 100ಕ್ಕಿಂತ ಕಡಿಮೆ ಪೊಲೀಸರು ಮಾತ್ರ!

ರಾಜಮನೆತನದ ವೈಭೋಗ

ಇಲ್ಲಿ ಸಾಂವಿಧಾನಿಕ ರಾಜಪ್ರಭುತ್ವದ ಆಡಳಿತವಿದೆ. ಇಲ್ಲಿನ ರಾಜಕುಮಾರ ಎಷ್ಟು ಶ್ರೀಮಂತರೆಂದರೆ, ಅವರ ಆಸ್ತಿ ಇಂಗ್ಲೆಂಡ್‌ನ ರಾಜರಿಗಿಂತಲೂ ಅಧಿಕ! ದೇಶದ ಮೇಲೆ ಯಾವುದೇ ಸಾಲವಿಲ್ಲ ಮತ್ತು ತೆರಿಗೆ ಕೂಡ ಅತ್ಯಂತ ಕಡಿಮೆ.

ಅಪರಾಧ ಮುಕ್ತ ನಾಡು: ಜೈಲಿನಲ್ಲಿರೋದು ಕೇವಲ 7 ಜನ

ಇಲ್ಲಿನ ಅಪರಾಧ ಪ್ರಮಾಣ ಶೂನ್ಯಕ್ಕೆ ಸಮನಾಗಿದೆ. ಜನರು ತಮ್ಮ ಮನೆಗಳಿಗೆ ಬೀಗವನ್ನೇ ಹಾಕುವುದಿಲ್ಲವಂತೆ! ಇಡೀ ದೇಶದ ಜೈಲಿನಲ್ಲಿರುವುದು ಕೇವಲ 7 ಜನ ಕೈದಿಗಳು. ಇವರಿಗೆ ಹೋಟೆಲ್‌ಗಳಿಂದಲೇ ಊಟ ಸರಬರಾಜು ಆಗುತ್ತದೆ ಎಂದರೆ ನೀವು ನಂಬಲೇಬೇಕು!

ಜನರಿಗಿಂತ ಉದ್ಯೋಗಗಳೇ ಹೆಚ್ಚು

ಈ ದೇಶದ ಮತ್ತೊಂದು ವಿಶೇಷವೆಂದರೆ ಇಲ್ಲಿನ ಒಟ್ಟು ಜನಸಂಖ್ಯೆಗಿಂತ ಅಲ್ಲಿರುವ ಉದ್ಯೋಗಗಳ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿಯೇ ನೆರೆಯ ಜರ್ಮನಿ ಮತ್ತು ಆಸ್ಟ್ರಿಯಾದಿಂದ ಜನರು ಇಲ್ಲಿಗೆ ಕೆಲಸಕ್ಕೆ ಬರುತ್ತಾರೆ.

ಹಲ್ಲುಗಳ ರಫ್ತಿನಲ್ಲಿ ವಿಶ್ವಕ್ಕೇ ಬಾಸ್:ಈ ಪುಟ್ಟ ದೇಶವು ಕೃತಕ ಹಲ್ಲುಗಳ (Dentures) ಉತ್ಪಾದನೆ ಮತ್ತು ರಫ್ತಿನಲ್ಲಿ ಜಗತ್ತಿನಲ್ಲೇ ನಂಬರ್ 1 ಸ್ಥಾನದಲ್ಲಿದೆ.

ಇಲ್ಲಿನ ಜನರು ಬಹಳ ಶಿಸ್ತಿನ ಸಿಪಾಯಿಗಳು. ಅನಗತ್ಯ ಶಬ್ದ ಮಾಡುವುದು ಅಥವಾ ಶ್ರೀಮಂತಿಕೆಯನ್ನು ಪ್ರದರ್ಶಿಸುವುದನ್ನು ಇಲ್ಲಿ ಕೆಟ್ಟ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular