HomeKarnatakaBIG NEWS: ಅಕ್ಕಿ, ಭತ್ತ ದಾಸ್ತಾನು ಮಾಡುವ ವ್ಯಾಪಾರಿಗಳ ಮೇಲೆ ಹದ್ದಿನ ಕಣ್ಣು: ಪ್ರತಿ ವಾರ...

BIG NEWS: ಅಕ್ಕಿ, ಭತ್ತ ದಾಸ್ತಾನು ಮಾಡುವ ವ್ಯಾಪಾರಿಗಳ ಮೇಲೆ ಹದ್ದಿನ ಕಣ್ಣು: ಪ್ರತಿ ವಾರ ಸ್ಟಾಕ್ ವಿವರ ಘೋಷಿಸಲು ಸೂಚನೆ

ಅಕ್ಕಿ, ಭತ್ತ ವ್ಯಾಪಾರಿಗಳು ವೆಬ್ ಪೋರ್ಟಲ್‍ನಲ್ಲಿ ನೋಂದಣಿಯಾಗಿ ಅಕ್ಕಿ ದಾಸ್ತಾನು ವಿವರ ದಾಖಲಿಸಲು ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಅಕ್ಕಿ, ಭತ್ತದ ಘಟಕಗಳ ವ್ಯಾಪಾರಿಗಳು, ಸಗಟು ವ್ಯಾಪಾರಿ, ಚಿಲ್ಲರೆ ವ್ಯಾಪಾರಿ, ಬಿಗ್ ಚೈನ್ ರೀಟೇಲರ್, ಬ್ರೋಕನ್ ರೈಸ್, ನಾನ್-ಬಾಸ್ಮತಿ ವೈಟ್, ಪರ್ಬಾಯಿಲ್ಡ್, ಬಾಸ್ಮತಿ ಅಕ್ಕಿ ಹಾಗೂ ಭತ್ತ ದಾಸ್ತಾನು ಬಗ್ಗೆ ಕೇಂದ್ರ ಸರ್ಕಾರದ ವೆಬ್ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡು. ಪ್ರತಿ ಶುಕ್ರವಾರ ಅಕ್ಕಿ, ಭತ್ತದ ದಾಸ್ತಾನನ್ನು ವೆಬ್ ಪೋರ್ಟಲ್  https://eve oils.nic.in/login.html ಮೂಲಕ ಘೋಷಿಸಿಕೊಳ್ಳಲು ತಿಳಿಸಲಾಗಿದೆ.

ನೋಂದಣಿ ಮತ್ತು ದಾಸ್ತಾನು ಘೋಷಣೆ ಸಂಬಂಧ ಸೃಷ್ಟೀಕರಣ, ಸಮಸ್ಯೆ ನಿವಾರಣೆಗಾಗಿ ಕೇಂದ್ರ ಸರ್ಕಾರದ ಇ-ಮೇಲ್  [email protected] ಅನ್ನು ಸಂಪರ್ಕಿಸಲು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾ ಹಂತದಲ್ಲಿ ನೋಂದಣಿ ಮತ್ತು ದಾಸ್ತಾನು ಘೋಷಣೆಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳ ನಿವಾರಣೆಗಾಗಿ ವಸಂತ್ ಕುಮಾರ್ ಎಸ್.ಜಿ. ದೂ.ಸಂ; 9986212164 ಗೆ ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಸಿದ್ರಾಮ್ ಮರಿಹಾಳ್  ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular