HomeKarnatakaರೇಣುಕಾಸ್ವಾಮಿ ಕೊಲೆ ಪ್ರಕರಣ: ತನಿಖೆಯಲ್ಲಿ ಬಯಲಾಯ್ತು ದರ್ಶನ್ ಸಹಚರರ ಮತ್ತಷ್ಟು ದುಷ್ಕೃತ್ಯ

ರೇಣುಕಾಸ್ವಾಮಿ ಕೊಲೆ ಪ್ರಕರಣ: ತನಿಖೆಯಲ್ಲಿ ಬಯಲಾಯ್ತು ದರ್ಶನ್ ಸಹಚರರ ಮತ್ತಷ್ಟು ದುಷ್ಕೃತ್ಯ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿರುವ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ರೇಣುಕಾಸ್ವಾಮಿ ಕೊಲೆ ಮಾಡಿದ ಬಳಿಕ ಲಕ್ಷ್ಮಣ ಹಾಗೂ ನಾಗರಾಜ್ ಆರ್.ಆರ್. ನಗರದ ಟ್ರೆಂಡ್ಸ್ ನಲ್ಲಿ ಹೊಸ ಬಟ್ಟೆ ಖರೀದಿಸಿದ್ದರು. ಹಳೆ ಬಟ್ಟೆ ಎಸೆದು ಹೊಸ ಬಟ್ಟೆ ಖರೀದಿಸಿದ್ದ ಆರೋಪಿಗಳು ನಂತರ ಗಣೇಶ ದೇವಾಲಯಕ್ಕೆ ಹೋಗಿ ಕೈ ಮುಗಿದಿದ್ದರು. ಆರ್.ಆರ್. ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಗಣೇಶ ದೇವಾಲಯಕ್ಕೆ ಹೋಗಿ ದೇವರಿಗೆ ಕೈ ಮುಗಿದಿದ್ದರು. ಸದ್ಯ ಆರೋಪಿಗಳನ್ನು ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದಾರೆ. ಟ್ರೆಂಡ್ಸ್ ಬಟ್ಟೆ ಶೋರೂಮ್ ಮತ್ತು ದೇವಸ್ಥಾನದ ಬಳಿ ಸ್ಥಳ ಮಹಜರು ನಡೆಸಲಾಗಿದೆ.

ಇನ್ನು ಪ್ರಕರಣದ ಮತ್ತೊಬ್ಬ ಆರೋಪಿ ಧನರಾಜ್ ಡಿಯೋ ಸ್ಕೂಟರ್ ನಲ್ಲಿ ಪಟ್ಟಣಗೆರೆ ಶೆಡ್ ಗೆ ಆಗಮಿಸಿದ್ದು, ಎಲೆಕ್ಟ್ರಿಕ್ ಡಿವೈಸ್ ತಂದಿದ್ದ. ಈ ಡಿವೈಸ್ ನಿಂದ ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿತ್ತು ಎನ್ನಲಾಗಿದ್ದು, ತನಿಖೆ ಮುಂದುವರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular