HomeKarnatakaBREAKING NEWS: ನಟ ದರ್ಶನ್ ಮನೆ ಬಳಿ ಇದ್ದ 3 ಬೈಕ್ ಪೊಲೀಸ್ ವಶಕ್ಕೆ

BREAKING NEWS: ನಟ ದರ್ಶನ್ ಮನೆ ಬಳಿ ಇದ್ದ 3 ಬೈಕ್ ಪೊಲೀಸ್ ವಶಕ್ಕೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ್ನು ಬಂಧಿಸಿರುವ ಪೊಲೀಸರು ಇದೀಗ ದರ್ಶನ್ ಮನೆ ಬಳಿ ಇದ್ದ ಮೂರು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ನಟ ದರ್ಶನ್ ಅವರ ಆರ್.ಆರ್.ನಗರ ಮನೆ ಬಳಿ ನಿಲ್ಲಿಸಿದ್ದ ಮೂರು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬೈಕ್ ಗಳು ಬಂಧಿತ ಆರೋಪಿಗಳ ಹೆಸರಲ್ಲಿವೆ ಎಂದು ತಿಳಿದುಬಂದಿದೆ.

ಹೊಂದಾ ಶೈನ್, ಆಕ್ಟೀವಾ, ಟಿವಿಎಸ್ ಜುಪಿಟರ್ ಬೈಕ್ ಗಳನ್ನು ವಶಕ್ಕೆ ಪಡೆದಿದ್ದು, ಹೋಂದಾ ಶೈನ್ ಬೈಕ್ ಆರೋಪಿ ನಂದೀಶ್ ಹೆಸರಲ್ಲಿ ಇದೆ, ಹೋಂಡಾ ಆಕ್ಟೀವಾ ಆರೋಪಿ ಮರಿಯಪ್ಪ ಸಿ ಹೆಸರಲ್ಲಿ ಹಾಗೂ ಟಿವಿಎಸ್ ಜುಪಿಟರ್ ಆರೋಪಿ ರಾಮಕೃಷ್ಣ ಹೆಸರಲ್ಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೂರು ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular