HomeKarnatakaರೇಣುಕಾಸ್ವಾಮಿ ಹತ್ಯೆ ಕೇಸ್; ದರ್ಶನ್ ಸೇರಿ ಈವರೆಗೆ 19 ಆರೋಪಿಗಳು ಅರೆಸ್ಟ್; 7 ಆರೋಪಿಗಳಿಗೆ ದರ್ಶನ್...

ರೇಣುಕಾಸ್ವಾಮಿ ಹತ್ಯೆ ಕೇಸ್; ದರ್ಶನ್ ಸೇರಿ ಈವರೆಗೆ 19 ಆರೋಪಿಗಳು ಅರೆಸ್ಟ್; 7 ಆರೋಪಿಗಳಿಗೆ ದರ್ಶನ್ ಪರಿಚಯವೇ ಇಲ್ಲ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ನಡುವೆ ಹತ್ಯೆ ಪ್ರಕರಣದಲ್ಲಿ ಈವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ.

ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಈವರೆಗೆ ಒಟ್ಟು 19 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಪೈಕಿ 7 ಆರೋಪಿಗಳಿಗೆ ನಟ ದರ್ಶನ್ ಪರಿಚಯವೇ ಇಲ್ಲ ಎಂದು ತಿಳಿದುಬಂದಿದೆ.

7 ಆರೋಪಿಗಳು ನಟ ದರ್ಶನ್ ನನ್ನು ಮೊದಲ ಬಾರಿ ಭೇಟಿ ಮಾಡಿದವರಾಗಿದ್ದಾರೆ. ಎ7 ಆರೋಪಿ ಅನುಕುಮಾರ್, ಎ8 ಆರೋಪಿ ರವಿ, ಎ 15 ಆರೋಪಿ ಕಾರ್ತಿಕ್ ಸೇರಿದಂತೆ ಹಲವು ಆರೋಪಿಗಳುನಟ ದರ್ಶನ್ ನನ್ನು ಪೊಲೀಸ್ ಠಾಣೆಯಲ್ಲಿಯೇ ನೋಡಿದ್ದು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular