HomeLatest Newsಬೆಂಗಳೂರು ಬಾಡಿಗೆ ಬಜಾರ್‌ನಲ್ಲಿ ರಿವರ್ಸ್ ಗೇರ್: ಅತಿಯಾದ ಆಸೆಗೆ ಬಿದ್ದು 5 ಲಕ್ಷ ಕಳೆದುಕೊಂಡ ವೈಟ್‌ಫೀಲ್ಡ್...

ಬೆಂಗಳೂರು ಬಾಡಿಗೆ ಬಜಾರ್‌ನಲ್ಲಿ ರಿವರ್ಸ್ ಗೇರ್: ಅತಿಯಾದ ಆಸೆಗೆ ಬಿದ್ದು 5 ಲಕ್ಷ ಕಳೆದುಕೊಂಡ ವೈಟ್‌ಫೀಲ್ಡ್ ಮಾಲೀಕ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆ ಸಿಗುವುದೇ ಒಂದು ದೊಡ್ಡ ಯುದ್ಧ ಅಂದುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಿ. ಗಗನಕ್ಕೇರುತ್ತಿದ್ದ ಬೆಂಗಳೂರಿನ ಬಾಡಿಗೆ ಮಾರುಕಟ್ಟೆಯಲ್ಲಿ ಈಗ ಪರಿಸ್ಥಿತಿ ಬದಲಾಗುತ್ತಿದೆ. ವೈಟ್‌ಫೀಲ್ಡ್‌ನ ಮಾಲೀಕರೊಬ್ಬರು ಬಾಡಿಗೆಯ ಅತಿಯಾದ ಆಸೆಗೆ ಬಿದ್ದು ಈಗ ಬರೋಬ್ಬರಿ 5 ಲಕ್ಷ ರೂಪಾಯಿ ನಷ್ಟ ಅನುಭವಿಸಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ.ರೆಡ್ಡಿಟ್ (Reddit) ವೇದಿಕೆಯಲ್ಲಿ ಬಾಡಿಗೆದಾರರೊಬ್ಬರು ಹಂಚಿಕೊಂಡಿರುವ ಈ ರಿಯಲ್ ಎಸ್ಟೇಟ್ ಟ್ರ್ಯಾಜೆಡಿ ಈಗ ವೈರಲ್ ಆಗಿದೆ.

ಘಟನೆಯ ಹಿನ್ನಲೆ


ವೈಟ್‌ಫೀಲ್ಡ್‌ನ ಪೈಪ್ ಸೊಸೈಟಿಯೊಂದರಲ್ಲಿ 3BHK ಫ್ಲಾಟ್ ಹೊಂದಿದ್ದ ಮಾಲೀಕರು, ಮಾರುಕಟ್ಟೆಯ ಟ್ರೆಂಡ್ ನೋಡಿ ಪ್ರತಿ ಕೋಣೆಗೆ ₹25,000 ಬಾಡಿಗೆ ಫಿಕ್ಸ್ ಮಾಡಿದ್ದರು. ಆದರೆ ಟ್ವಿಸ್ಟ್ ಇಲ್ಲಿದೆ: ಆ ಏರಿಯಾದಲ್ಲಿ ಸರಾಸರಿ ಬಾಡಿಗೆ ದರ ಇರುವುದೇ ₹20,000. ಅಕ್ಕಪಕ್ಕದವರಿಗಿಂತ ಹೆಚ್ಚು ಹಣ ಪಡೆಯಬೇಕೆಂಬ ಇವರ ಪ್ಲ್ಯಾನ್ ತಲೆಕೆಳಗಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ವರ್ಷದಿಂದ ಎರಡು ರೂಮ್‌ಗಳು ಖಾಲಿ ಒಬ್ಬರೇ ಬಾಡಿಗೆದಾರರು ಇಡೀ 3BHK ಫ್ಲಾಟ್ ಅನ್ನು ಕೇವಲ ₹25,000ಕ್ಕೆ ಎಂಜಾಯ್ ಮಾಡುತ್ತಿದ್ದಾರೆ.ವಿಶಾಲವಾದ ಮನೆಯಲ್ಲಿ ಒಬ್ಬನೇ ರಾಜನಂತೆ ವಾಸವಿದ್ದೇನೆ ಎಂದು ಬಾಡಿಗೆದಾರ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ದರ ಇಳಿಸಿದರೂ ಡಿಮ್ಯಾಂಡ್ ಇಲ್ಲ
ವರ್ಷ ಪೂರ್ತಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ನಂತರ, ಮಾಲೀಕರು ಈಗ ಬುದ್ಧಿ ಕಲಿತು ಬಾಡಿಗೆಯನ್ನು ಪ್ರತಿ ಕೋಣೆಗೆ ₹18,000ಕ್ಕೆ ಇಳಿಸಿದ್ದಾರೆ. ಆದರೂ ಜನರು ಮನೆ ನೋಡಲು ಬರುತ್ತಿದ್ದಾರೆಯೇ ಹೊರತು, ಅಡ್ವಾನ್ಸ್ ನೀಡಲು ಯಾರೂ ಮನಸ್ಸು ಮಾಡುತ್ತಿಲ್ಲ.

ಐಟಿ ಹಬ್‌ನಲ್ಲಿ ಬಾಡಿಗೆ ಯಾಕೆ ಇಳಿಯುತ್ತಿದೆ?
ರೆಡ್ಡಿಟ್ ಪೋಸ್ಟ್ ಪ್ರಕಾರ, ವೈಟ್‌ಫೀಲ್ಡ್ ಭಾಗದಲ್ಲಿ ಈ ಬದಲಾವಣೆಗೆ ಮುಖ್ಯ ಕಾರಣಗಳು:

ಅರ್ಧ ಖಾಲಿ ಟೆಕ್ ಪಾರ್ಕ್‌ಗಳು: ಅನೇಕ ಹೊಸ ಐಟಿ ಪಾರ್ಕ್‌ಗಳಲ್ಲಿ ಇನ್ನೂ ಶೇ. 50 ರಷ್ಟು ಕೆಲಸಗಾರರು ತುಂಬಿಲ್ಲ.

ಬಳಕೆಯಾಗದ ಸ್ಪೇಸ್: ವರ್ತೂರು ರಸ್ತೆಯ ಬ್ರಿಗೇಡ್ ಪ್ರಾಜೆಕ್ಟ್ ಮತ್ತು ಡಿಎಸ್‌ಆರ್ (DSR) ಕಟ್ಟಡಗಳಲ್ಲಿ ಅಪಾರ ಪ್ರಮಾಣದ ಜಾಗಗಳು ಇಂದಿಗೂ ಬಳಕೆಯಾಗದೆ ಉಳಿದಿವೆ.

ಬೆಂಗಳೂರಿನ ಮನೆ ಮಾಲೀಕರಿಗೆ ಇದೊಂದು ಎಚ್ಚರಿಕೆಯ ಗಂಟೆ. ಡಿಮ್ಯಾಂಡ್ ಇದೆ ಎಂದು ಮನಬಂದಂತೆ ಬಾಡಿಗೆ ಏರಿಸಿದರೆ, ಕೊನೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಪಾಠವನ್ನು ಈ ವೈಟ್‌ಫೀಲ್ಡ್ ಮಾಲೀಕ ಕಲಿಸಿದ್ದಾರೆ. ಸದ್ಯಕ್ಕಂತೂ ಈ ಸುದ್ದಿಯಿಂದ ಬೆಂಗಳೂರಿನ ಬಾಡಿಗೆದಾರರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular