HomeLatest NewsBREAKING : ಹೃದಯಾಘಾತದಿಂದ ಹಿರಿಯ ರಂಗಭೂಮಿ ಕಲಾವಿದ 'ಯಶವಂತ ಸರದೇಶಪಾಂಡೆ' ನಿಧನ.!

BREAKING : ಹೃದಯಾಘಾತದಿಂದ ಹಿರಿಯ ರಂಗಭೂಮಿ ಕಲಾವಿದ ‘ಯಶವಂತ ಸರದೇಶಪಾಂಡೆ’ ನಿಧನ.!

ಬೆಂಗಳೂರು : ಹೃದಯಾಘಾತದಿಂದ ಖ್ಯಾತ ನಟ, ರಂಗಭೂಮಿ ನಿರ್ದೇಶಕ ‘ಯಶವಂತ ಸರದೇಶಪಾಂಡೆ’ ನಿಧನರಾಗಿದ್ದಾರೆ.

‘ಯಶವಂತ ಸರದೇಶಪಾಂಡೆ’  ಅವರು ಇಂದು ಬೆಳಗ್ಗೆ ನಿಧನರಾಗಿದ್ದು, ಅವರಿಗೆ 60 ವರ್ಷ ವಯಸ್ಸಾಗಿತ್ತು. ಹೃದಯಾಘಾತ ಉಂಟಾದ ಕೂಡಲೇ ಅವರನ್ನು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇವರು ನಟಿಸಿ-ನಿರ್ದೇಶಿಸಿರುವ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದರು. ಇವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದೆಯಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಶವಂತ ಸರದೇಶಪಾಂಡೆಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ೧೩.೦೬.೧೯೬೫ರಲ್ಲಿ. ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular