HomeBusinessಕೆಲಸ ಮಾಡಲು ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ರಿಟೇಲ್‌ಗೆ 13ನೇ ಸ್ಥಾನ: ಮತ್ತೊಂದು ಮಹತ್ವದ ಸಾಧನೆ

ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ರಿಟೇಲ್‌ಗೆ 13ನೇ ಸ್ಥಾನ: ಮತ್ತೊಂದು ಮಹತ್ವದ ಸಾಧನೆ

ಮುಂಬಯಿ: ದೇಶದ ಅತಿ ದೊಡ್ಡ ರಿಟೇಲ್ ಜಾಲವನ್ನು ಹೊಂದಿರುವ ರಿಲಯನ್ಸ್ ರಿಟೇಲ್ (Reliance Retail) ಸಂಸ್ಥೆಯು ಉದ್ಯೋಗಿಗಳ ಪಾಲಿಗೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಗ್ರೇಟ್ ಪ್ಲೇಸ್ ಟು ವರ್ಕ್ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಸ್ಥಳ – 2026 ರ ಟಾಪ್-100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ರಿಟೇಲ್ 13ನೇ ರ‍್ಯಾಂಕಿಂಗ್ ಪಡೆದುಕೊಂಡು ಬೀಗಿದೆ ಮುಂಬಯಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಈ ರ‍್ಯಾಂಕಿಂಗ್ ಅನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಮೊದಲ ಮೂರು ಸ್ಥಾನಗಳಲ್ಲಿ ಯಾವ ಕಂಪನಿಗಳಿವೆ?

ಭಾರತದಲ್ಲಿ ಉದ್ಯೋಗಿಗಳಿಗೆ ಅತ್ಯುತ್ತಮ ವಾತಾವರಣ ಒದಗಿಸುವ ಟಾಪ್-3 ಕಂಪನಿಗಳ ಲಿಸ್ಟ್ ಹೀಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಲ್ಟನ್ (Hilton) – ಮೊದಲ ಸ್ಥಾನ

ಸಿಸ್ಕೋ ಸಿಸ್ಟಮ್ಸ್ ಇಂಡಿಯಾ (Cisco Systems India) – ಎರಡನೇ ಸ್ಥಾನ

ಸಿಂಕ್ರೋನಿ ಇಂಟರ್‌ನ್ಯಾಶನಲ್ ಸರ್ವಿಸಸ್ (Synchrony International) – ಮೂರನೇ ಸ್ಥಾನ

30 ಲಕ್ಷಕ್ಕೂ ಅಧಿಕ ಉದ್ಯೋಗಿ ಬಳಗ ಆದರೂ ರೇಟಿಂಗ್ ಸೂಪರ್

ವರದಿಯ ಪ್ರಕಾರ, ರಿಲಯನ್ಸ್ ರಿಟೇಲ್ ಭಾರತದಲ್ಲಿ ಬರೋಬ್ಬರಿ 1,30,457 ಉದ್ಯೋಗಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಇಷ್ಟೊಂದು ಬೃಹತ್ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವಾಗ ಕಂಪನಿಯ ಕೆಲಸದ ವಾತಾವರಣ ಮತ್ತು ಸಂಸ್ಕೃತಿಯನ್ನು ಅತ್ಯುತ್ತಮವಾಗಿ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಆದರೆ, ಆ ಎಲ್ಲಾ ಸವಾಲುಗಳನ್ನು ಮೀರಿ ರಿಲಯನ್ಸ್ ರಿಟೇಲ್ 13ನೇ ಸ್ಥಾನ ಪಡೆದಿರುವುದು ಕಂಪನಿಯ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗಟ್ಟಿ ಉದ್ಯೋಗಿ ಸಂಸ್ಕೃತಿಗೆ ಸಾಕ್ಷಿಯಾಗಿದೆ.

ಇಷ್ಟೇ ಅಲ್ಲದೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು ರಿಲಯನ್ಸ್ ರಿಟೇಲ್ ಸಂಸ್ಥೆಗಳನ್ನು ಜಂಟಿಯಾಗಿ “ರಾಷ್ಟ್ರ ನಿರ್ಮಾಣದಲ್ಲಿ ಭಾರತದ ಅತ್ಯುತ್ತಮ ಉದ್ಯೋಗದಾತರು” (Best Employers in Nation-Building) ಎಂದು ವಿಶೇಷವಾಗಿ ಗುರುತಿಸಿ ಗೌರವಿಸಲಾಗಿದೆ.

ರ‍್ಯಾಂಕಿಂಗ್ ಮೌಲ್ಯಮಾಪನ ಹೇಗೆ ನಡೆಯುತ್ತದೆ?

ಈ ರ‍್ಯಾಂಕಿಂಗ್ ಅನ್ನು ಯಾವುದೇ ತೀರ್ಪುಗಾರರು ಅಥವಾ ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯದ ಮೇಲೆ ನಿರ್ಧರಿಸಲಾಗುವುದಿಲ್ಲ. ಬದಲಿಗೆ ಸಂಪೂರ್ಣವಾಗಿ ಸೈಂಟಿಫಿಕ್ ಆಗಿ ಮೌಲ್ಯಮಾಪನ ಮಾಡಲಾಗುತ್ತದೆ:

ಟ್ರಸ್ಟ್ ಇಂಡೆಕ್ಸ್ ಸರ್ವೆ (Trust Index Survey): ಶೇ. 75 ರಷ್ಟು ಆದ್ಯತೆ (ಉದ್ಯೋಗಿಗಳ ನೇರ ಪ್ರತಿಕ್ರಿಯೆ ಮತ್ತು ಅನುಭವ).

ಸಾಂಸ್ಕೃತಿಕ ಮೌಲ್ಯಮಾಪನ (Culture Audit): ಶೇ. 25 ರಷ್ಟು ಆದ್ಯತೆ (ಕಂಪನಿಯ ಕಾರ್ಯವೈಖರಿ ಮತ್ತು ಪದ್ಧತಿಗಳು).

ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಹಾರ, ಸಪ್ಲೈ ಚೈನ್ ಹಾಗೂ ಹೊಸ ತಂತ್ರಜ್ಞಾನಗಳು ವೇಗವಾಗಿ ಬದಲಾಗುತ್ತಿರುವ ರಿಟೇಲ್ ವಲಯದಲ್ಲಿ ರಿಲಯನ್ಸ್ ಈ ಸಾಧನೆ ಮಾಡಿರುವುದು ಉದ್ಯೋಗಿಗಳಿಗೆ ಕಂಪನಿ ನೀಡುವ ಗೌರವವನ್ನು ಎತ್ತಿ ತೋರಿಸುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular