HomeEntertainmentಜನವರಿ 10 ಕ್ಕೆ ತೆರೆ ಮೇಲೆ ಬರಲಿದೆ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು'

ಜನವರಿ 10 ಕ್ಕೆ ತೆರೆ ಮೇಲೆ ಬರಲಿದೆ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’

ಕೇಶವಮೂರ್ತಿ ನಿರ್ದೇಶನದ ದಿಲೀಪ್ ರಾಜ್ ಅಭಿನಯದ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಚಿತ್ರ ಈಗಾಗಲೇ ತನ್ನ ಶೀರ್ಷಿಕೆ ಮೂಲಕ ಎಲ್ಲರ ಗಮನ ಸೆಳೆದಿದ್ದು, ಮುಂದಿನ ವರ್ಷ ಜನವರಿ 10 ರಂದು ಬಿಡುಗಡೆಗೆ ಸಿದ್ಧವಾಗಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಚಿತ್ರವನ್ನು ಪಿಕ್ಚರ್ ಶಾಪ್ ಹಾಗೂ ನೇಟಿವ್ ಕ್ರಾಫ್ಟ್ ಬ್ಯಾನರ್ ನಲ್ಲಿ ಮಗೇಶ್ ರವೀಂದ್ರನ್, ಕುಬೇಂದ್ರನ್ ನಿರ್ಮಾಣ ಮಾಡಿದ್ದು, ದಿಲೀಪ್ ರಾಜ್ ಸೇರಿದಂತೆ ಶಿಲ್ಪ ಮಂಜುನಾಥ್, ಮಧುಸೂದನ್ ಗೋವಿಂದ್, ಅಪೂರ್ವ, ಅಜಯ್ ಶರ್ಮ, ಪ್ರಸನ್ನ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದು, ಕೇಶವಮೂರ್ತಿ ಸಂಭಾಷಣೆ, ಕುಬೇಂದ್ರನ್ ಸಂಕಲನ ಹಾಗೂ ಹರ್ಷ ಕುಮಾರ್ ಗೌಡ ಛಾಯಾಗ್ರಾಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular