HomeLive Newsಮಾವು ಉತ್ಪಾದನಾ ತಾಂತ್ರಿಕತೆ ಮತ್ತು ಮಾರಾಟ ಕುರಿತು ಒಂದು ದಿನದ ವಿಶೇಷ ತರಬೇತಿಗೆ ನೋಂದಣಿ ಪ್ರಾರಂಭ

ಮಾವು ಉತ್ಪಾದನಾ ತಾಂತ್ರಿಕತೆ ಮತ್ತು ಮಾರಾಟ ಕುರಿತು ಒಂದು ದಿನದ ವಿಶೇಷ ತರಬೇತಿಗೆ ನೋಂದಣಿ ಪ್ರಾರಂಭ

ಧಾರವಾಡ : ನವೆಂಬರ್ 15, 2025 ರಂದು ಧಾರವಾಡ ಪೂನಾ ಬೆಂಗಳೂರು ಹೆದ್ದಾರಿ ಹತ್ತಿರದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 5:30 ರ ವರೆಗೆ ಮಾವು ಬೆಳೆಯ ಬೇಸಾಯ, ರೋಗ ಹಾಗೂ ಕೀಟ ನಿರ್ವಹಣೆ ಮತ್ತು ಮಾವು ಸಂಸ್ಕರಣೆ ಹಾಗೂ ಮಾರಾಟ ತಂತ್ರಜ್ಞಾನಗಳ ಕುರಿತು ತರಬೇತಿ ಆಯೋಜಿಸಲಾಗಿದೆ.

ತರಬೇತಿ ನಂತರ, ಆಸಕ್ತ ಮಾವು ಬೆಳೆಗಾರನ್ನು ಮಾವು ಬೆಳೆ ತೋಟದ ಕ್ಷೇತ್ರಗಳಿಗೆ, ತಜ್ಞರೊಂದಿಗೆ ಭೇಟಿ ನೀಡಿಸಿ, ತಿಳುವಳಿಕೆ ನೀಡಲಾಗುತ್ತದೆ.

ಆಸಕ್ತ ಮಾವು ಬೆಳೆಗಾರರು ತರಬೇತಿಗೆ ರೂ.500 ಗಳನ್ನು ಸಂದಾಯಿಸಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಮೊಬೈಲ್ ನಂ: 8277800110 ಗೆ ಸಂಪರ್ಕಿಸಬಹುದು ಎಂದು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular